ಶಬರಿಮಲೆ: ಶಬರಿಮಲೆಯಲ್ಲಿ ಹಲವು ವರ್ಷಗಳಿಂದ ಪೋಲೀಸರು ನಡೆಸಿಕೊಂಡು ಬರುತ್ತಿದ್ದ ಕರ್ಪೂರಾಳಿ ಎಂಬ ಆಚರಣೆ ಹಿಂಪಡೆಯಲು ನಿರ್ಧರಿಸಲಾಗಿದೆ.
ಪೋಲೀಸರಲ್ಲಿ ಸಿಪಿಎಂ ಬಣದ ಒತ್ತಡದಿಂದಾಗಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಈ ಆಚರಣಾ ಕ್ರಮ ರದ್ದಾಗಲಿದೆ.
ಶಬರಿಮಲೆಯಲ್ಲಿ ದೇವಸ್ವಂ ಬೋರ್ಡ್ ನೌಕರರು ಹಾಗೂ ಪೋಲೀಸರು ಕರ್ಪೂರ ಅರ್ಪಿಸಿ ನಡೆಸುವ ಆಚರಣೆ ಹಲವು ದಶಕಗಳಿಂದ ನಡೆದುಬರುತ್ತಿದೆ. ಮಕರ ಬೆಳಕು ಉತ್ಸವಕ್ಕೂ ಮೊದಲು ಕೊಡಿಮರದಿಂದ ಹೊರಡುವ ಕರ್ಪೂ ಆರತಿ ಮೆರವಣಿಗೆ ಮಾಲಿಕಪ್ಪುರಂ ಮೂಲಕ 18ನೇ ಮೆಟ್ಟಿಲು ಕೆಳಗಿರುವ ಆಹ್ರಿ ಬಳಿ ಕೊನೆಗೊಳ್ಳುತ್ತದೆ. ಆದರೆ ಈ ಬಾರಿ ಅಂತಹ ಸಮಾರಂಭಗಳಲ್ಲಿ ಪೋಲೀಸರು ಪಾಲ್ಗೊಳ್ಳದಿರಲು ನಿರ್ಧರಿಸಲಾಗಿದೆ. ಪೋಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಒತ್ತಡಕ್ಕೆ ಮಣಿದು ಪೋಲೀಸರು ಇಂತಹ ಹಳೆಯ ಆಚರಣೆಗಳಿಂದ ದೂರ ಉಳಿಯಲು ಮುಂದಾಗಿದ್ದಾರೆ.
ಪೋಲೀಸ್ ಅಧಿಕಾರಿಗಳ ದೊಡ್ಡ ವಿಭಾಗವು ಒತ್ತಡಕ್ಕೆ ಮಣಿಯುವುದನ್ನು ಮತ್ತು ದೀರ್ಘಾವಧಿಯ ಸಮಾರಂಭದಿಂದ ಹಿಂದೆ ಸರಿಯುವುದನ್ನು ವಿರೋಧಿಸಿದೆ. ಒಂದು ವಿಭಾಗ ಇದನ್ನು ಪರಿಗಣಿಸದೆ ನಿರ್ಧಾರಕ್ಕೆ ಮುಂದಾಗಿದೆ.
ಪೋಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಫೇಸ್ ಬುಕ್ ಪೋಸ್ಟ್ ನಿಂದಾಗಿ ಈ ಬಗೆಗಿನ ನಿರ್ಧಾರ-ವಿವಾದಗಳು ಹೊರಬಿದ್ದಿದೆ. ಇದನ್ನು ವಿರೋಧಿಸಿದವರಿಗೆ ಶಬರಿಮಲೆ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ ಎಂದೂ ಆರೋಪಿಸಲಾಗಿದೆ.
ಜೊತೆಗೆ ಪುಣ್ಯಂ ಪೂಂಗಾವನಂ ಯೋಜನೆ 2011 ರ ಪೋಲೀಸರ ಉನ್ನತಮಟ್ಟದ ನಿರ್ಧಾರದ ಬಳಿಕ ಈ ಕ್ರಮವೂ ಈಗ ನಿಂತಿದೆ.
ಶಬರಿಮಲೆಯಲ್ಲಿ ಪೋಲೀಸರ ಕರ್ಪೂರಾತಿ ಆಚರಣೆ ನಿಲ್ಲಿಸಲು ನಿರ್ಧಾರ: ಪೋಲೀಸರಲ್ಲಿ ಸಿಪಿಎಂ ಪರ ಸಂಘಟನೆಗಳ ಒತ್ತಡದ ಹಿನ್ನೆಲೆಯಲ್ಲಿ ಕ್ರಮ
0
ನವೆಂಬರ್ 27, 2022
Tags