ತಿರುವನಂತಪುರ: ವಿವಾದಿತ ಪತ್ರದ ಕಾನೂನು ವಿವಾದದಲ್ಲಿ ತಿರುವನಂತಪುರ ಕಾರ್ಪೋರೇಶನ್‍ನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ಬಿಜೆಪಿ ಕೌನ್ಸಿಲರ್‍ಗಳ ಪ್ರತಿಭಟನೆಯ ನಂತರ ನಗರಸಭೆಗೆ ಯೂತ್ ಕಾಂಗ್ರೆಸ್ಸ್ ಕಾರ್ಯಕರ್ತರ ತೀವ್ರ ಪ್ರತಿಭಟನೆ ನಡೆಸಿತು.
ಪೋಲೀಸರು ಯೂತ್ ಕಾಂಗ್ರೆಸ್ಸ್ ಕಾರ್ಯಕರ್ತರು ನಡುವೆ ಘರ್ಷಣೆ ನಡೆಯಿತು. ಕಾರ್ಯಕರ್ತರನ್ನು ಹಿಮ್ಮೆಟ್ಟಿಸಲು ಜಲ ಪಿರಂಗಿಯನ್ನು ಪೋಲೀಸರು ಪ್ರಯೋಗಿಸಿದರು. ನಗರಸಭೆಯಲ್ಲಿ ಗಂಟೆಗಟ್ಟಲೆ ಸಂಘರ್ಷ ಮುಂದುವರಿಯಿತು. ಕಾರ್ಪೋರೇಶನ್ ಗೆ ಪ್ರವೇಶಿಸುವ ಗ್ರಿಲ್ ಮುಚ್ಚದ ನಂತರ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಗೆ ಬಿಜೆಪಿ ಕೌನ್ಸಿಲರ್‍ಗಳು ಬೀಗಜಡಿದರು. ನಂತರ ಸಿಪಿಎಂ ಕೌನ್ಸಿಲರ್‍ಗಳು ಬಿಜೆಪಿ ಕೌನ್ಸಿಲರ್‍ಗಳ ಮಧ್ಯೆ ಸಂಘರ್ಷ ನಡೆಯಿತು.
ಇದರ ಬೆನ್ನಲ್ಲೇ ಸಿಪಿಎಂ ಕೌನ್‍ಸಿಲರ್‍ಗಳ ಆಕ್ರಮಣದಲ್ಲಿ ಬಿಜೆಪಿ ಕೌನ್ಸಿಲರ್‍ಗಳಿಗೆ ಗಾಯಗೊಂಡಿದ್ದಾರೆ. ಜನತೆಗೆ ಕಾರ್ಪೋರೇಶನ್ ಗೆ ಆಗಮಿಸಲು ಬಳಸುವ ಗೇಟನ್ನು ಸಿಪಿಎಂ ಕೌನ್ಸಿಲರ್‍ಗಳು ಮುಚ್ಚದರು. ಪ್ರಬಲ ಪ್ರತಿಭಟನೆ ಮೇಯರ್ ವಿರುದ್ಧ ನಡೆಯುತ್ತಿದೆ.
ಮೇಯರ್ ರಾಜೀನಾಮೆ ಕೋರಿದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ವ್ಯಾಪಕಗೊಳ್ಳುತ್ತಿದೆ. ಬಿಜೆಪಿ ಮಹಿಳಾ ಕೌನ್ಸಿಲರ್‍ಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಮೇಯರ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕೌನ್ಸಿಲರ್‍ಗಳು ಗವರ್ನರ್ ಆರಿಫ್ ಮಹಮ್ಮದ್ ಖಾನ್ ಅವರನ್ನು ರಾಜ್ಯಭವನದಲ್ಲಿ ಸಂದರ್ಶಿಸಿ ಮನವಿ ಸಲ್ಲಿಸಿದರು.
ಸಂಘರ್ಷ ಸೃಷ್ಟಿಯಾದ ರಾಜಧಾನಿ ನಗರಿ: ಮೇಯರ್ ರಾಜೀನಾಮೆ ಒತ್ತಾಯಿಸಿ ಮಾರ್ಚ್
0
ನವೆಂಬರ್ 07, 2022
Tags