HEALTH TIPS

ಸ್ಟೇಜ್​ ಮೇಲೆಯೇ ಅನಾರೋಗ್ಯಕ್ಕೆ ತುತ್ತಾದ ನಿತಿನ್​ ಗಡ್ಕರಿ.

 

            ಸಿಲಿಗುರಿ: ಕೇಂದ್ರದ ಹೆದ್ದಾರಿ ಮತ್ತು ಸಾರಿಗೆ ಮಂತ್ರಿ ನಿತಿನ್​ ಗಡ್ಕರಿ ಪಶ್ಚಿಮ ಬಂಗಾಳದ ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್​ವರೆಗಿನ ರಸ್ತೆಯ ಶಂಕುಸ್ಥಾಪನೆ ಮಾಡಲು ಸಿಲಿಗುರಿಗೆ ಬಂದಿದ್ದರು. ಗುರುವಾರ  ಡಾರ್ಜಿಲಿಂಗ್ ಜಂಕ್ಷನ್ ಬಳಿಯ ದಗಾಪುರ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

          ಕಾರ್ಯಕ್ರಮದ ನಡುವೆ ವೇದಿಕೆಯ ಮೇಲೆ ಕುಳಿತಿದ್ದಂತೆಯೇ ಒಮ್ಮೆಲೆ ನಿತಿನ್​ ಗಡ್ಕರಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೇಂದ್ರ ಮಂತ್ರಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆ ಅವರನ್ನು ವೇದಿಕೆಯ ಹಿಂದಿನ ಗ್ರೀನ್​ ರೂಮ್​ಗೆ ಕೂಡಲೆ ಕರೆದುಕೊಂಡು ಹೋಗಲಾಯಿತು. ಆದರೆ ಆರೋಗ್ಯ ಹತೋಟಿಗೆ ಬರಲಿಲ್ಲ.

               ಗ್ರೀನ್​ ರೂಮ್​ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಅವರ ತಪಾಸಣೆಗಾಗಿ ಸಿಲಿಗುರಿಯಿಂದ ಗ್ರೀನ್​ ಕಾರಿಡಾರ್​ ಮೂಲಕ ಓರ್ವ ವೈದ್ಯರನ್ನು ಕರೆತರಲಾಯಿತು. ಆರೋಗ್ಯ ಸ್ವಲ್ಪ ಸುಧಾರಿಸಿದ ನಂತರ ದಾರ್ಜಿಲಿಂಗ್​ನ ಸಂಸದ ರಾಜು ಬಿಸ್ತಾ ನಿತಿನ್​ ಗಡ್ಕರಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.

            ಬಲ್ಲ ಮೂಲಗಳ ಪ್ರಕಾರ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಇಳಿದಿದೆ. ಈಗ ವೈದ್ಯರ ಸಲಹೆ ಪ್ರಕಾರ ಅವರಿಗೆ ಸಲೈನ್​ ಟ್ರೀಟ್​ಮೆಂಟ್​ ಪ್ರಾರಂಭಿಸಲಾಗಿದೆ. ಕೇಂದ್ರ ಸಚಿವರ ಚಿಕಿತ್ಸೆಗೆ ಮತಿಗಾರದಲ್ಲಿರುವ ಅವರ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಅವರೊಂದಿಗೆ ವೈದ್ಯರೂ ಇದ್ದಾರೆ. ಸಿಲಿಗುರಿಯಲ್ಲಿ ನಡೆದ ಸಮಾರಂಭದ ನಂತರ ಅವರು ದಲ್ಖೋಲಾಗೆ ಹೋಗಬೇಕಿತ್ತು. ಮೂಲಗಳ ಪ್ರಕಾರ ಆ ಕಾರ್ಯಕ್ರಮವೇ ರದ್ದಾಗಬಹುದು. ಅವರು ಸಿಲಿಗುರಿಯಿಂದ ದೆಹಲಿಗೆ ಹಿಂತಿರುಗುವ ಸಾಧ್ಯತೆ ಎದ್ದು ಕಾಣುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries