ಕಾಸರಗೋಡು: ಮಹಿಳಾ ಆಯೋಗ ಹಾಗೂ ಜಿಲ್ಲಾ ಪಂಚಾಯತ್ ಜಂಟಿಯಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾಸರಗೋಡು ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲಿ ಜರುಗಿತು. ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಮೊದಲು ಕುಟುಂಬ ವ್ಯವಸ್ಥೆ ಬಲಪಡಿಸಬೇಕು. ಮನೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಹಾನುಭೂತಿಯಿಂದ ಬೆಳೆಸಬೇಕು ಜತೆಗೆ ಮನೆಯಲ್ಲಿ ಸಂವಹನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಾತಾವರಣ ಇರಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಕೀಲೆ ಎಸ್.ಎನ್.ಸರಿತಾ, ಕುಟುಂಬಶ್ರೀ ಎಡಿಎಂಸಿ ಪ್ರಕಾಶನ್ ಪಾಲಾಯಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ, ಜಿಲ್ಲಾ ಜಾಗೃತ ಸಮಿತಿ ಸದಸ್ಯೆ ಎಂ.ಸುಮತಿ ಉಪಸ್ಥಿತರಿದ್ದರು. ಲಿಂಗ ಕಾನೂನು ಮತ್ತು ಸಂವಿಧಾನ ಎಂಬ ವಿಷಯದ ಬಗ್ಗೆ ಗ್ರಾಮ ಪಂಚಾಯಿತಿ ಅಸೋಸಿಯೇಶನ್ ಸಂಘದ ಜಿಲ್ಲಾ ಕಾರ್ಯದರ್ಶಿ ವಕೀಲೆ ಎ.ಪಿ.ಉಷಾ ಹಾಗೂ ಮಹಿಳಾ ಸಹಾಯಿ ವ್ಯವಸ್ಥೆಗಳ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ.ವಿ.ಲತಿಕಾ ಅವರು ತರಗತಿ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿಗಳು, ಕುಟುಂಬಶ್ರೀಸದಸ್ಯರು, ಸಿಡಿಎಸ್ ಅಧ್ಯಕ್ಷರು, ಐಸಿಡಿಎಸ್ ನ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಕೇರಳ ಮಹಿಳಾ ಆಯೋಗದ ಪೆÇ್ರ.ಶ್ರೀಕಾಂತ್ ಎಂ.ಗಿರಿನಾಥ್ ಸ್ವಾಗತಿಸಿದರು.
ಕುಟುಂಬ ವ್ಯವಸ್ಥೆ ಬಲಗೊಂಡಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ-ಮಹಿಳಾ ಆಯೋಗ ರಾಜ್ಯಾಧ್ಯಕ್ಷೆ ಅಭಿಮತ
0
ನವೆಂಬರ್ 29, 2022
Tags