ಕಾಸರಗೋಡು: ಬದಿಯಡ್ಕದ ದಂತ ವೈದ್ಯ ಡಾ. ಕೃಷ್ಣಮೂರ್ತಿ ಸರ್ಪಂಗಳ(57) ಅವರ ನಿಗೂಢ ಸಾವಿಗೆ ಸಂಬಂಧಿಸಿ ಬಂಧಿತರಾದ ಐದು ಮಂದಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ನ. 25ರಂದು ಪರಿಗಣಿಸಲಿದೆ. ಅಶ್ರಫ್ ಕುಂಬ್ಡಾಜೆ, ಮಹಮ್ಮದ್ ಶಿಹಾಬುದ್ದೀನ್, ಉಮರುಲ್ ಫಾರೂಕ್, ಮಹಮ್ಮದ್ ಹನೀಫ್ ಯಾನೆ ಅನ್ವರ್ ಹಾಗೂ ಆಲಿ ತುಪ್ಪೆಕಲ್ಲು ಎಂಬವರು ಬಂಧಿತರಾಗಿದ್ದು, ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆಸ್ಪತ್ರೆಗೆ ಅತಿಕ್ರಮಿಸಿ ಪ್ರವೇಶ, ವೈದ್ಯಗೆ ಬೆದರಿಕೆ, ಆತ್ಮಹತ್ಯಾ ಪ್ರೇರಣೆ ಎಂಬ ಆರೋಪಗಳನ್ವಯ ಇವರ ಮೇಲೆ ಬದಿಯಡ್ಕ ಠಾಣೆಯಲ್ಲಿ ಕೇಸು ದಾಖಲಾಗಿದೆ. ನ. 8ರಂದು ಮಧ್ಯಾಹ್ನ ಬದಿಯಡ್ಕದ ತಮ್ಮ ಕ್ಲಿನಿಕ್‍ನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಡಾ. ಕೃಷ್ಣ ಮೂರ್ತಿ ಅವರ ಮೃತದೇಹ ಮರುದಿನ ಕುಂದಾಪುರ ಹಟ್ಟಿಯಂಗಡಿ ಸನಿಹದ ಕಾಡುಅಜ್ಜಿಮನೆ ಬಳಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಮಹಿಳೆಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದಲ್ಲಿ ತಂಡ ಕ್ಲಿನಿಕ್‍ಗೆ ಆಗಮಿಸಿ ವೈದ್ಯರನ್ನು ಅವಾಚ್ಯವಗಿ ನಿಂದಿಸಿ, ಇವರಿಗೆ ಬೆದರಿಕೆಯೊಡ್ಡಿತ್ತು.
ದಂತ ವೈದ್ಯ ನಿಗೂಢ ಸಾವು: ಬಂಧಿತರ ಜಾಮೀನು ಅರ್ಜಿ ಇಂದು ಪರಿಗಣನೆ
0
ನವೆಂಬರ್ 24, 2022
Tags