ಎರ್ನಾಕುಳಂ: ಕೆ.ಎಸ್.ಆರ್.ಟಿ.ಸಿ. ಬಸ್‍ನಲ್ಲಿ ಗಣೇಶ ಮೂರ್ತಿ ಪತ್ತೆಯಾಗಿದೆ. ಬಸ್ಸಿನ ಸೀಟಿನ ಕೆಳಗೆ ವಿಗ್ರಹವನ್ನು ಬಚ್ಚಿಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.
ಬಸ್ ನಿಲ್ದಾಣದಲ್ಲಿ ನಿಂತ ನಂತರ ಮೂರ್ತಿ ಕಂಡುಬಂತು. ಎರ್ನಾಕುಳಂ ಪರವೂರಿನಲ್ಲಿ ಈ ಘಟನೆ ನಿನ್ನೆ ನಡೆದಿದೆ.
ಎರ್ನಾಕುಳಂನಿಂದ ಗುರುವಾಯೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಈ ವಿಗ್ರಹ ಪತ್ತೆಯಾಗಿದೆ. ಬಸ್ಸಿನಲ್ಲಿ ವಿಗ್ರಹವ ಕೆ.ಎಸ್.ಆರ್.ಟಿ.ಸಿ ಬಸ್ಸಿನೊಳಗೆ ಗಣೇಶ ವಿಗ್ರಹ ಪತ್ತೆ: ಪೋಲೀಸರಿಂದ ತನಿಖೆ ಆರಂಭ ನ್ನು ಯಾರು ತಂದಿರುವರು ಎಂಬ ಮಾಹಿತಿ ಲಭ್ಯವಾಗಿಲ್ಲ. ವಿಗ್ರಹ ಸುಮಾರು ಏಳು ಕಿಲೋ ಭಾರವಿದೆ.
ವಿಗ್ರಹದ ಕಾಲಗಣನೆ ಸ್ಪಷ್ಟವಾಗಿಲ್ಲ. ವಿಗ್ರಹದ ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗುವುದು. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರ ಹೇಳಿಕೆಯನ್ನೂ ಪೋಲೀಸರು ಸಂಗ್ರಹಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಬಸ್ಸಿನೊಳಗೆ ಗಣೇಶ ವಿಗ್ರಹ ಪತ್ತೆ: ಪೋಲೀಸರಿಂದ ತನಿಖೆ ಆರಂಭ
0
ನವೆಂಬರ್ 05, 2022