ನವದೆಹಲಿ: ದೇಶಕ್ಕೆ ಕೋವಿಡ್ ಸಂಕಷ್ಟ ಎದುರಾಗಿದ್ದಾಗ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಮಾಜಿ ನಿರ್ದೇಶಕ ರಂದೀಪ್ ಗುಲೇರಿಯಾ ಏಮ್ಸ್ ತೊರೆದಿದ್ದಾರೆ.
ಗುಲೇರಿಯಾ ಏಮ್ಸ್‌ನಿಂದ ಸ್ವಯಂ ನಿವೃತ್ತಿಗಾಗಿ ಮನವಿ ಸಲ್ಲಿಸಿದ್ದರು.
ಅವರ ಅವಧಿ 2024ರವರೆಗೆ ಇತ್ತು. ಮನವಿ ಅಂಗೀಕಾರವಾಗಿದೆ ಎಂದು ಪಿಟಿಐ ವರದಿ ಮಾಡಿದೆ.
1992 ರಲ್ಲಿ ಏಮ್ಸ್‌ನಲ್ಲಿ ಮೆಡಿಸೆನ್ ವಿಭಾಗ ಸೇರಿದ್ದ ಗುಲೇರಿಯಾ, ಶ್ವಾಸಕೋಶ ವಿಭಾಗ, ಕ್ರಿಟಿಕಲ್ ಕೇರ್ ವಿಭಾಗ ಆರಂಭಿಸಿದ್ದರು. 2017ರಲ್ಲಿ ಏಮ್ಸ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. 2020 ರಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಒಂದು ಬಾರಿ ಅವರ ನಿರ್ದೇಶಕ ಸ್ಥಾನದ ಅವಧಿಯನ್ನು ವಿಸ್ತರಿಸಲಾಗಿತ್ತು. ತಮ್ಮ ಮುಂದಿನ ನಡೆ ಬಗ್ಗೆ ಗುಲೇರಿಯಾ ಅವರು ತಿಳಿಸಿಲ್ಲ.