ತಿರುವನಂತಪುರಂ: ಸರ್ಕಾರದ ಓಣಂಕಿಟ್‍ನಲ್ಲೂ ಭ್ರμÁ್ಟಚಾರದ ಹೊಗೆ ಕಂಡುಬಂದಿದೆ. ಉಚಿತ ಆಹಾರ ಕಿಟ್‍ನಲ್ಲಿದ್ದ ಉಪ್ಪಿನ ಪೊಟ್ಟಣದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ.
ಕಿಟ್‍ನಲ್ಲಿ ಆಹಾರ ಇಲಾಖೆ ಸೂಚಿಸಿದ ಬ್ರಾಂಡ್ ಬದಲಿಗೆ ಆಮದು ಮಾಡಿಕೊಂಡ ಉಪ್ಪನ್ನು ಸೇರಿಸಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಸರ್ಕಾರವು ತನಿಖೆ ನಡೆಸಲು ತ್ರಿಸದಸ್ಯ ಸಮಿತಿಯನ್ನು ನೇಮಿಸಿತು.
ಆಹಾರ ಕಿಟ್‍ನಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಸೇರಿಸಬೇಕೆಂದು ನಿರ್ಧರಿಸಲಾಗಿತ್ತು. ಕಳೆದ ಬಾರಿ ಹೆಚ್ಚಿನ ವಿವಾದಗಳ ಹಿನ್ನೆಲೆಯಲ್ಲಿ ಸರಕಾರ ಈ ನಿಲುವು ತಳೆದಿತ್ತು. ಕಿಟ್‍ನಲ್ಲಿ ಶಬರಿ ಬ್ರಾಂಡ್ ಉಪ್ಪನ್ನು ಸೇರಿಸುವ ಪ್ರಸ್ತಾವನೆ ಇತ್ತು. ಆದರೆ ಕಿಟ್ ನಿಂದ ಪ್ರತ್ಯೇಕವಾಗಿ ಉಪ್ಪಿನ ಪೊಟ್ಟಣ ಸೇರಿಸುವ ಮೂಲಕ ಇದನ್ನು ಬುಡಮೇಲು ಮಾಡಲಾಯಿತು. 85 ಲಕ್ಷ ಕುಟುಂಬಗಳಿಗೆ ನೀಡಬೇಕಾದ ಕಿಟ್‍ನಲ್ಲಿ ಆಹಾರ ಇಲಾಖೆ ಸೂಚಿಸದ ಉಪ್ಪನ್ನು ಸೇರಿಸಿ ಅಧಿಕಾರಿಗಳು ಭ್ರμÁ್ಟಚಾರ ನಡೆಸಿದ್ದಾರೆ.
ಕಿಟ್‍ನಲ್ಲಿನ ಭ್ರμÁ್ಟಚಾರದ ಬಗ್ಗೆ ದೂರು ಬಂದ ನಂತರ, ರಾಜ್ಯ ಮಟ್ಟದ ತಪಾಸಣಾ ತಂಡವನ್ನು ರಚಿಸಿ ತನಿಖೆ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ. ನಾಗರಿಕ ಸರಬರಾಜು ಕಮಿಷನರೇಟ್ ನ ಮುಖ್ಯ ಲೆಕ್ಕಾಧಿಕಾರಿ ವಿ.ಸುಭಾಸ್ ನೇತೃತ್ವದ ಮೂವರು ಸದಸ್ಯರ ತಂಡ ಪರಿಶೀಲನೆ ನಡೆಸಲಿದೆ. ಮಾನದಂಡ ಅನುಸರಿಸದೆ ಖರೀದಿ ಮಾಡಿರುವ ಬಗ್ಗೆಯೂ ತಂಡ ತನಿಖೆ ನಡೆಸಲಿದೆ ಎಂಬ ಮಾಹಿತಿ ಹೊರಬರುತ್ತಿದೆ.
ಭಷ್ಟಾಚಾರದ ಸುಳಿಯಲ್ಲಿ ಓಣಂ ಕಿಟ್: ಶಿಫಾರಸು ಮಾಡದ ಉಪ್ಪಿನ ಪ್ಯಾಕೆಟ್ ವಿತರಣೆ: ತನಿಖೆಗೆ ಆದೇಶ
0
ನವೆಂಬರ್ 05, 2022