ತಿರುವನಂತಪುರ: ಸೇವಾ ನಿಯಮಗಳನ್ನು ಉಲ್ಲಂಘಿಸಿ ರಾಜಭವನ ಮಾರ್ಚ್‍ನಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಯನ್ನು ಕೇಳಿದ್ದಾರೆ.
ಹಾಜರಾತಿ ನಮೂದಿಸಿದ ನಂತರ ಈ ನೌಕರರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದರ ಚಿತ್ರಗಳೂ ಬಿಡುಗಡೆಯಾಗಿದ್ದವು.
ಎಲ್.ಡಿ.ಎಫ್.ನಿಂದ ನಡೆದ ರಾಜಭವನ ಮುತ್ತಿಗೆಯಲ್ಲಿ ಸೆಕ್ರೆಟರಿಯೇಟ್‍ನ ಏಳು ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜಭವನದ ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿಗೆ ಕೇಳಿದ್ದಾರೆ. ಕೆಲಸ ಮಾಡಲು ಕಚೇರಿಯಲ್ಲಿ ಹಾಜರಾರತಿ ಹಾಕಿ ನೌಕರರು ಮುಷ್ಕರ ಹೂಡಿದ್ದಾರೆಯೇ? ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆಯೂ ತಿಳಿಸುವಂತೆ ಪತ್ರದಲ್ಲಿ ಕೋರಲಾಗಿದೆ.
ರಾಜಭವನ ಮಾರ್ಚ್‍ನಲ್ಲಿ ಸೆಕ್ರೆಟರಿಯೇಟ್‍ನ ಉನ್ನತ ಅಧಿಕಾರಿಗಳು ಭಾಗವಹಿಸಿರುವ ವಿಡಿಯೋ ಮತ್ತು ಪೋಟೋಗಳನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿತ್ತು. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೂ ದೂರು ನೀಡಲಾಗಿದೆ.
ರಾಜಭವನದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಜರು ದಾಖಲಿಸಿ ಪ್ರತಿಭಟನೆಗೆ ತೆರಳಿದ್ದರು: ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ; ವಿವರಣೆ ಕೇಳಿದ ರಾಜ್ಯಪಾಲರು
0
ನವೆಂಬರ್ 23, 2022