ಮುಳ್ಳೇರಿಯ: ಕಾರಡ್ಕ ಐಸಿಡಿಎಸ್ ಯೋಜನೆಯ ಅಧೀನದಲ್ಲಿ ದೇಲಂಪಾಡಿ, ಬೆಳ್ಳೂರು, ಕುಂಬ್ದಾಜೆ ಮತ್ತು ಕಾರಡ್ಕ ಪಂಚಾಯತಿಗಳ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು / ಸಹಾಯಕಿಯರ ಹುದ್ದೆಗಳ ಖಾಯಂ ನೇಮಕಾತಿಗಾಗಿ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು ಆಯಾ ಪಂಚಾಯತಿಗಳ ಖಾಯಂ ನಿವಾಸಿಗಳಾಗಿರಬೇಕು. ವಯಸ್ಸಿನ ಮಿತಿ 18-46ವರ್ಷಗಳು. ವರ್ಕರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರಬಾರದು. ಓದಲು ಮತ್ತು ಬರೆಯಲು ತಿಳಿದಿರಬೇಕು. ಅರ್ಜಿ ನಮೂನೆಯನ್ನು ಕಾರಡ್ಕ ಐಸಿಡಿಎಸ್ ಕಛೇರಿ ಮತ್ತು ಪಂಚಾಯತಿಗಳಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು ನವೆಂಬರ್ 22 ಅಚಿತಿಮ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 04994 261159 ಸಂಪರ್ಕಿಸಲು ಸೂಚಿಸಲಾಗಿದೆ.
ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
0
ನವೆಂಬರ್ 09, 2022
Tags