ಕಾಸರಗೋಡು: ಜಿಲ್ಲೆಯ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಪರವನಡ್ಕ ಸರ್ಕಾರಿ ಮಾದರಿ ವಸತಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಗುತ್ತಿಗೆ ಆಧಾರದ ಮೇಲೆ ಜೂನಿಯರ್ ಹೆಲ್ತ್ ನರ್ಸ ನೇಮಕಾತಿ ನಡೆಯಲಿದ್ದು, ಇದಕ್ಕಾಗಿ ಪರಿಶಿಷ್ಟ ವರ್ಗದ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇರಳ ನರ್ಸ್ ಮತ್ತು ಮಿಡ್‍ವೈವ್ಸ್ ಕೌನ್ಸಿಲ್, ನಸಿರ್ಂಗ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆ ನೀಡಿರುವ ಎನ್ ಎನ್ ಎಂ ಪ್ರಮಾಣ ಪತ್ರ ಅಥವಾ ಕೇರಳ ನರ್ಸ್ ಮತ್ತು ಮಿಡ್‍ವೈವ್ಸ್ ಕೌನ್ಸಿಲ್ ನೀಡಿರುವ ಹೆಲ್ತ್ ವರ್ಕರ್ಸ್ ಟ್ರೈನಿಂಗ್ ಸರ್ಟಿಫಿಕೇಟ್, ಕೇರಳ ದಾದಿಯರು ಮತ್ತು ಮಿಡ್‍ವೈವ್ಸ್ ಕೌನ್ಸಿಲ್ ನೋಂದಣಿ ಎಂಬೀ ಯೋಗ್ಯತೆ ಹೊಂದಿರುವವರಿಗೆ ಅರ್ಜಿ ಸಲ್ಲಿಸಬಹುದು. ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಈ ಕೆಲಸದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ನಿಗದಿತ ವಿದ್ಯಾರ್ಹತೆಯ ಅನುಪಸ್ಥಿತಿಯಲ್ಲಿ, ಬಿ.ಎಸ್ಸಿ ನಸಿರ್ಂಗ್ ಅನ್ನು ಪರಿಗಣಿಸಲಾಗುತ್ತದೆ. ವಯಸ್ಸಿನ ಮಿತಿ 18-40 ವರ್ಷಗಳಾಗಿದ್ದು, ನವೆಂಬರ್ 14ರ ಬೆಳಗ್ಗೆ 11ಕ್ಕೆ ಪರವನಡ್ಕ ಮಾದರಿ ವಸತಿ ವಿದ್ಯಾಲಯ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಆಸಕ್ತ ಅರ್ಹ ಅಭ್ಯರ್ಥಿಗಳು ಮೂಲ ಪ್ರಮಾಣಪತ್ರಗಳೊಂದಿಗೆ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (9446696011, 04994239969)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜೂನಿಯರ್ ಹೆಲ್ತ್ ನರ್ಸ ನೇಮಕಾತಿ: ಪ.ಜಾತಿ ಯುವತಿಯರಿಂದ ಅರ್ಜಿ ಆಹ್ವಾನ
0
ನವೆಂಬರ್ 11, 2022