ಕಾಸರಗೋಡು: ಖ್ಯಾತ ವಕೀಲ, ಕಾಸರಗೋಡು ಬಾರ್ ಅಸೋಸಿಯೇಶನ್‍ನ ಹಿರಿಯ ಸದಸ್ಯ ದಿ. ಪಿ.ವಿ.ಕೆ ನಾಯರ್ ಅವರ ಭಾವಚಿತ್ರ ಅನಾವರಣ ಸಮಾರಂಭ ವಿದ್ಯಾನಗರದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ಜರುಗಿತು.
ಕೇರಳ ಹೈಕೋರ್ಟ್ ನ್ಯಾಯಾಧೀಶೆ ಜಸ್ಟಿಸ್ ಅನು ಶಿವರಾಮನ್ ಅವರು ದಿ. ಪಿ.ವಿ.ಕೆ ನಾಯರ್ ಅವರ ಭಾವಚಿತ್ರ ಅನಾವರಣಗೊಳಿಸಿದರು. ಹೈಕೋರ್ಟು ನ್ಯಾಯಾಧೀಶರಾದ ಜಸ್ಟಿಸ್ ವಿ.ಜಿ ಅರುಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಬಾರ್ ಅಸೋಸಿಯೇಶನ್ ಅಧ್ಯಕ್ಷ ವಕೀಲ ಎಂ.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ. ಕೃಷ್ಣ ಕುಮಾರ್, ಹಿರಿಯ ವಕೀಲ ಐ.ವಿ ಭಟ್, ಹೊಸದುರ್ಗ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಾಜ್‍ಮೋಹನ್ ಉಪಸ್ಥಿತರಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಎಂ. ಪ್ರದೀಪ್ ರಾವ್ ಸ್ವಾಗತಿಸಿದರು. ಕೋಶಾಧಿಕಾರಿ, ವಕೀಲ ಶಮಸುದ್ದೀನ್ ವಂದಿಸಿದರು.
ಖ್ಯಾತ ವಕೀಲ ದಿ. ಪಿ.ವಿ.ಕೆ ನಾಯರ್ ಭಾವಚಿತ್ರ ಅನಾವರಣ
0
ನವೆಂಬರ್ 27, 2022