ಕೊಚ್ಚಿ: ಇಳಂತೂರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯವನ್ನು ಪತ್ತೆ ಹಚ್ಚಲು ತನಿಖಾ ತಂಡಕ್ಕೆ ಕೊನೆಗೂ ಸಾಧ್ಯವಾಗಿದೆ. ವಾಮಾಚಾರ ಮಾಡಿ ಬರ್ಬರವಾಗಿ ಹತ್ಯೆಗೀಡಾದ ಕಾಲಡಿ ಮೂಲದ ರೋಸ್ಲಿ ಅವರ ಚಿತ್ರ ತೆಗೆದಿರುವುದಾಗಿ ಲೈಲಾ ಪೋಲೀಸರಿಗೆ ಹೇಳಿಕೆ ನೀಡಿರುವರು.
ಕೈಕಾಲುಗಳನ್ನು ಕಟ್ಟಿ ಬೆತ್ತಲೆಯಾಗಿ ಚಿತ್ರ ತೆಗೆಯಲಾಗಿದೆ. ಆದರೆ ನಂತರ ಅದನ್ನು ಲೈಲಾ ಅವರ ಫೆÇೀನ್‍ನಿಂದ ಅಳಿಸಲಾಗಿದೆ. ಈ ಚಿತ್ರವು ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷಿಯಾಗಲಿದೆ ಎಂದು ಸೂಚಿಸಲಾಗಿದೆ. ಪೋಲೀಸರು ಲೈಲಾ ಅವರ ಪೋನ್‍ನಿಂದ ಚಿತ್ರವನ್ನು ಪಡೆಯಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಸದ್ಯ ಆರೋಪಿಯ ಹೇಳಿಕೆ ಮಾತ್ರ ಅಪರಾಧ ಎಸಗಿರುವುದು ಸಾಬೀತಾಗಿದೆ. ಉಳಿದೆಲ್ಲವೂ ಸಾಂದರ್ಭಿಕ ಸಾಕ್ಷಿ. ಹೀಗಿರುವಾಗ ಕೊಲೆಗೂ ಮುನ್ನ ರೋಸ್ಲಿಯ ಚಿತ್ರ ತೆಗೆದಿದ್ದೇನೆ ಎಂಬ ಲೈಲಾ ಹೇಳಿಕೆ ನಿರ್ಣಾಯಕವಾಗುತ್ತದೆ.
ಚಿತ್ರವನ್ನು ಮರುಪಡೆಯಲು ಲೈಲಾಳ ಮೊಬೈಲ್ ಪೋನ್‍ಗಳನ್ನು ಪರೀಕ್ಷೆಗೆ ನೀಡಲಾಗಿದೆ. ಈ ಘಟನೆಯ ವೇಳೆ ಲೈಲಾ ಎರಡು ಪೋನ್ ಬಳಸುತ್ತಿದ್ದರು ಎಂದು ವರದಿಯಾಗಿದೆ. ಈ ಎರಡೂ ಪೊನ್‍ಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ. ಎರಡನೇ ಆರೋಪಿ ಹಾಗೂ ಲೈಲಾ ಅವರ ಪತಿ ಭಗವಾಲ್ ಸಿಂಗ್ ಸ್ಮಾರ್ಟ್ ಪೋನ್ ಬಳಸುತ್ತಿಲ್ಲ ಎಂದು ತನಿಖಾ ತಂಡ ಬೊಟ್ಟು ಮಾಡಿದೆ.
ಏತನ್ಮಧ್ಯೆ, ಎರ್ನಾಕುಳಂ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕರಣದ ಮೂರನೇ ಆರೋಪಿ ಲೈಲಾಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಕೊಲೆಯಲ್ಲಿ ತನಗೆ ಸಂಬಂಧವಿಲ್ಲ ಎಂದು ಲೈಲಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಳು. ತನ್ನ ವಿರುದ್ಧದ ಆರೋಪಗಳನ್ನು ಪೋಲೀಸರು ನಿರ್ಮಿಸಿದ್ದಾರೆ ಎಂದು ಲೈಲಾ ಹೇಳಿದ್ದಳು. ಆದರೆ ಈ ಎಲ್ಲಾ ವಾದಗಳನ್ನು ತಿರಸ್ಕರಿಸುವ ಮೂಲಕ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ನಿರಾಳರಾದ ಪೋಲೀಸರು: ರೋಸ್ಲಿಯ ಚಿತ್ರ ತೆಗೆದಿರುವುದಾಗಿ ಕೊನೆಗೂ ಹೇಳಿಕೆ ನೀಡಿದ ಜೋಡಿ ಕೊಲೆ ಆರೋಪಿ ಲೈಲಾ
0
ನವೆಂಬರ್ 02, 2022