ಕಾಸರಗೋಡು: ಜಿಲ್ಲಾ ಮಟ್ಟದ ಸಾರ್ವಜನಿಕ ಚರ್ಚೆ ಮತ್ತು ಕೇರಳ ಪಠ್ಯಕ್ರಮದ ಜಿಲ್ಲಾ ಮಟ್ಟದ ಕ್ರೋಡೀಕರಣ ಸಭೆ ನಾಯ್ಮೂರಮೂಲೆ ಟಿ.ಐ.ಎಚ್.ಎಸ್.ಎಸ್ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಉದ್ಘಾಟಿಸಿದರು. ಡಯಟ್ ಪ್ರಾಚಾರ್ಯ ಡಾ.ಕೆ.ರಘುರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಟಿ.ಲಕ್ಷ್ಮಿ, ಸಮಗ್ರ ಶಿಕ್ಷಾ ಕೇರಳ ಜಿಲ್ಲಾ ಸಂಯೋಜಕ ಡಿ.ನಾರಾಯಣ, ಕೈಟ್ ಜಿಲ್ಲಾ ಸಂಯೋಜಕ ಎಂ.ಪಿ.ರಾಜೇಶ್ ಮಾತನಾಡಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ವಿ.ವಾಸು ಸ್ವಾಗತಿಸಿ, ಕಾಞಂಗಾಡ್ ಡಿಇಒ ಕೆ.ಸುರೇಶ್ ಕುಮಾರ್ ವಂದಿಸಿದರು. ಆಯಾ ಶಾಲೆ, ಪಂಚಾಯತಿ ಮತ್ತು ಬ್ಲಾಕ್ ಮಟ್ಟದಲ್ಲಿ ನಡೆದ ಚರ್ಚೆಗಳ ಕ್ರೋಡೀಕರಣವನ್ನು 26 ಕೇಂದ್ರೀಕೃತ ಕ್ಷೇತ್ರಗಳಾಗಿ ಮಾಡಲಾಗಿದೆ. ಡಯಟ್ ಅಧ್ಯಾಪಕ ಪಿ.ವಿ.ವಿನೋದ್ ಕುಮಾರ್ ನೇತೃತ್ವದಲ್ಲಿ ನೂತನ ಸೂಚನೆಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಕ್ರೋಡೀಕರಣ ನಡೆಯಿತು.
ಸಾರ್ವಜನಿಕ ಚರ್ಚೆ ಮತ್ತು ಕೇರಳ ಪಠ್ಯಕ್ರಮದ ಜಿಲ್ಲಾ ಮಟ್ಟದ ಕ್ರೋಡೀಕರಣ ಸಭೆ
0
ನವೆಂಬರ್ 25, 2022
Tags