ಕೋಝಿಕ್ಕೋಡ್; ಸಿಪಿಐಎಂ ನಾಯಕರು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪುನರುಚ್ಚರಿಸುವುದು ಮುಂದುವರಿಸಿದ್ದಾರೆ. ರಾಜ್ಯಗಳ ರಾಜ್ಯಪಾಲರಾಗಬೇಕಾದರೆ ಸ್ಥಿರಬುದ್ದಿ ಇರಬೇಕೆಂದು ಸಂವಿಧಾನದಲ್ಲಿ ಹೇಳಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ಸ್ವರಾಜ್ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿದೆ.
ಮೂವತ್ತೈದು ವರ್ಷ ದಾಟಿದ ಯಾರೂ ರಾಜ್ಯಪಾಲರಾಗಬಹುದು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ ಸ್ವರಾಜ್ ಲೇವಡಿ ಮಾಡಿದರು.
ರಾಜ್ಯಪಾಲರ ವಿರುದ್ಧ ಕೋಝಿಕ್ಕೋಡ್‍ನಲ್ಲಿ ನಡೆದ ಬಹುಜನ ಮೆರವಣಿಗೆಯನ್ನು ಉದ್ಘಾಟಿಸಿ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಆರ್‍ಎಸ್‍ಎಸ್ ಬರೆದುಕೊಡುವುದನ್ನು ರಾಜ್ಯಪಾಲರು ಮಾಡುತ್ತಿದ್ದಾರೆ ಎಂದೂ ಹೇಳಿರುವರು. ರಾಜ್ಯಪಾಲರ ವಿರುದ್ಧ ಎಂ.ಸ್ವರಾಜ್ ಹೇಳಿಕೆಗಳು ಇದೀಗ ವಿವಾದಕ್ಕೀಡಾಗುತ್ತಿವೆ. ಸಾಂವಿಧಾನಿಕ ಸ್ಥಾನಮಾನವನ್ನು ಕಡಿಮೆ ಅಂದಾಜು ಮಾಡುವುದರ ವಿರುದ್ಧ ಮತ್ತು ಅಪಹಾಸ್ಯ ಮಾಡುವುದರ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನ ಎಲ್‍ಡಿಎಫ್‍ನ ರಾಜಭವನ ಮುತ್ತಿಗೆಗೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದ್ದರು. ಮುತ್ತಿಗೆಯಲ್ಲಿ ಮೂರೂವರೆ ಕೋಟಿ ಜನರಲ್ಲಿ ಒಟ್ಟು 25,000 ಮಂದಿ ಭಾಗವಹಿಸಿದ್ದರು. ಉಳಿದವರು ತಮ್ಮೊಂದಿಗೆ ಇದ್ದಾರೆ ಎಂದು ರಾಜ್ಯಪಾಲರು ಪ್ರತಿಕ್ರಿಯೆ ನೀಡಿದ್ದರು.
ರಾಜ್ಯಪಾಲರಾಗಲು ಬುದ್ದಿ ಸ್ಥಿರವಾಗಿರಬೇಕೆಂದು ಎಲ್ಲೂ ಹೇಳಿಲ್ಲ: ವಿವಾದಾತ್ಮಕ ಹೇಳಿಕೆ ನೀಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ
0
ನವೆಂಬರ್ 16, 2022