HEALTH TIPS

ಭಾರತಕ್ಕೆ ಬರಲಿದೆಯಾ ಹೈಪರ್​ ಲೂಪ್​? ಈ ನಗರಗಳಲ್ಲಿ ಶುರುವಾಗಲಿದೆ ಅತೀ ವೇಗದ ಟ್ರೇನ್​.

 

         ನವದೆಹಲಿ: ಭಾರತದಲ್ಲಿ ಅತಿ ವೇಗದ ಪ್ರಯಾಣ ಸಾಧ್ಯವಾಗಿಸಲು ಹೈಪರ್‌ಲೂಪ್ ತಂತ್ರಜ್ಞಾನವನ್ನು ತರಲು ಕೆಲವು ವಿದೇಶಿ ಕಂಪನಿಗಳು ಆಸಕ್ತಿ ತೋರಿಸಿವೆ. ಆದರೆ ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು NITI ಆಯೋಗ್ ಸದಸ್ಯ ವಿಕೆ ಸಾರಸ್ವತ್ ಶುಕ್ರವಾರ ಹೇಳಿದ್ದಾರೆ.

            ವಿಕೆ ಸಾರಸ್ವತ್ ಭಾರತದಲ್ಲಿ ಹೈಪರ್‌ಲೂಪ್‌ನ ತಾಂತ್ರಿಕ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಸದ್ಯಕ್ಕೆ ಸಮಿತಿ ಪ್ರಾಥಮಿಕ ವರದಿ ಸಿದ್ಧಪಡಿಸಿದೆ ಎಂದು ವಿಕೆ ಸಾರಸ್ವತ್​ ಮಾಹಿತಿ ನೀಡಿದರು.

                              ಏನಿದು ಹೈಪರ್‌ಲೂಪ್?
                ಹೈಪರ್‌ಲೂಪ್ ಒಂದು ಟ್ಯೂಬ್‌ನಲ್ಲಿ ಚಲಿಸುವ ಹೈಸ್ಪೀಡ್ ರೈಲು. ಈ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಉದ್ಯಮಿ ಎಲೋನ್ ಮಸ್ಕ್ ಅತಿ ಹೆಚ್ಚು ಕೊಡುಗೆ ನೀಡಿದ್ದಾರೆ. ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾ ಮಾಲೀಕ ಎಲಾನ್​ ಮಸ್ಕ್‌ಗೆ ಈ ತಂತ್ರಜ್ಞಾನ ಒಂದು ಕಾಲದಲ್ಲಿ ಕನಸಿನ ಕೂಸಾಗಿತ್ತು. ಈ ತಂತ್ರಜ್ಞಾನದ ಸಹಾಯದಿಂದ ಜನರು ಅಥವಾ ಸರಕುಗಳನ್ನು ಜಗತ್ತಿನ ಯಾವುದೇ ಸ್ಥಳದಲ್ಲಿ ಸುರಕ್ಷಿತವಾಗಿ ಸಾಗಿಸಬಹುದು. ಇದರಿಂದ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತಿದೆ.

                  ಹೈಪರ್‌ಲೂಪ್‌ನಲ್ಲಿ 'ಟ್ಯೂಬ್ ಮಾಡ್ಯುಲರ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್' ಎನ್ನುವ ಟೆಕ್ನಾಲಜಿ ಬಳಸಲಾಗುತ್ತದೆ. ಈ ವ್ಯವಸ್ಥೆ ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಂದು ಜೆಟ್​ನ​ ವೇಗದಲ್ಲಿ ಸಾಗಿಸುತ್ತದೆ. ಇದರ ವೇಗ ಗಂಟೆಗೆ 760 ಮೈಲುಗಳಷ್ಟು ಇರುತ್ತದೆ ಎಂದು ಅಂದಾಜಿಸಲಾಗಿದೆ.

                                ಯಾವಾಗ ನಡೆಯಿತು ವಿಶ್ವದ ಮೊದಲ ಹೈಪರ್‌ಲೂಪ್ ಪರೀಕ್ಷೆ?
              ನ.9 2020ರಂದು ಅಮೆರಿಕದ ಲಾಸ್ ವೇಗಸ್‌ನಲ್ಲಿ 500-ಮೀಟರ್ ಟ್ರ್ಯಾಕ್‌ನಲ್ಲಿ ಪಾಡ್‌ಗಳೊಂದಿಗೆ ವರ್ಜಿನ್ ಸಂಸ್ಥೆ ಹೈಪರ್‌ಲೂಪ್​ನ ಪರೀಕ್ಷೆ ನಡೆಸಿತು. ಹೈಪರ್‌ಲೂಪ್ ವಾಹನಗಳನ್ನು ಪಾಡ್ಸ್ ಎಂದು ಕರೆಯಲಾಗುತ್ತದೆ. ಅದರ ಚೊಚ್ಚಲ ಪ್ರಯಾಣದಲ್ಲಿ, ಒಬ್ಬ ಭಾರತೀಯ ಸೇರಿದಂತೆ ಇತರ ಕೆಲವು ಪ್ರಯಾಣಿಕರು ಸಹ ಭಾಗಿಯಾಗಿದ್ದರು. ಇದು 100 mph ಅಥವಾ 161 kmph ಗಿಂತ ಹೆಚ್ಚಿನ ವೇಗದಲ್ಲಿ ತನ್ನ ಪ್ರಯಾಣವನ್ನು ಮುಗಿಸಿತ್ತು.

                               ಭಾರತದಲ್ಲಿ ಯಾವಾಗ ಹೈಪರ್​ಲೂಪ್​?
             ವರ್ಜಿನ್ ಹೈಪರ್‌ಲೂಪ್ ಪ್ರಸ್ತುತ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವ ಬೆರಳೆಣಿಕೆಯ ಕಂಪನಿಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಹೈಪರ್‌ಲೂಪ್​ಅನ್ನು ಸಾರ್ವಜನಿಕ ಮೂಲಸೌಕರ್ಯವಾಗಿ ಒಪ್ಪಿಕೊಂಡಿದೆ. ವರ್ಜಿನ್ ಹೈಪರ್‌ಲೂಪ್ ಈ ಹಿಂದೆ ಮುಂಬೈ-ಪುಣೆ ಹೈಪರ್‌ಲೂಪ್ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದು ಈಗ ಆ ಯೋಜನೆಗೆ ಅನುಮೋದನೆ ಕೂಡ ಸಿಕ್ಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries