ತಿರುವನಂತಪುರ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಸರ್ಕಾರಿ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಟೋನ್ಮೆಂಟ್ ಪೋಲೀಸರು ತಿರುವನಂತಪುರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಎಂ ಶಿವಶಂಕರ್ ಆರೋಪಿಯಲ್ಲ. ಆದರೆ ಮತ್ತೋರ್ವ ಆರೋಪಿ ಅಮೃತಸರ ಮೂಲದ ಸಚ್ಚಿಂದಾಸ್ ಎಂಬಾತ ನಕಲಿ ಪ್ರಮಾಣಪತ್ರವನ್ನು ತಯಾರಿಸಿದ್ದಾನೆ.
ಕೆಎಸ್ ಐಟಿಎಲ್ ನಲ್ಲಿ ಸ್ವಪ್ನಾ ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗೆ ಮಹಾರಾಷ್ಟ್ರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾಂತ್ರಿಕ ವಿಶ್ವವಿದ್ಯಾನಿಲಯದ ಪದವಿ ಪ್ರಮಾಣ ಪತ್ರವನ್ನು ಬಳಸದ್ದಳು. ಚಿನ್ನ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಕೆಎಸ್‍ಐಟಿಎಲ್ ಪದವಿ ನಕಲಿಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ವಿವಿಯ ರಿಜಿಸ್ಟ್ರಾರ್ ಅವರು ಜುಲೈ 20 ರಂದು ಕಂಟೋನ್ಮೆಂಟ್ ಪೋಲೀಸರಿಗೆ ಮಾಹಿತಿ ನೀಡಿದ್ದು, ಅವರು ಅಂತಹ ಪದವಿಯನ್ನು ನೀಡಿಲ್ಲ. ಇದಲ್ಲದೇ ಈ ವಿವಿಯಲ್ಲಿ ಕಾಮರ್ಸ್ ಕೋರ್ಸ್ ನಡೆಸುತ್ತಿಲ್ಲ ಮತ್ತು ಪ್ರಮಾಣಪತ್ರದಲ್ಲಿ ದಾಖಲಾಗಿರುವ ರಿಜಿಸ್ಟರ್ ನಂಬರ್ ಮತ್ತು ರೋಲ್ ನಂಬರ್ ವಿವಿ ಮುದ್ರಿಸಿದ ಪ್ರಮಾಣಪತ್ರದ ಸ್ವರೂಪದಲ್ಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಕಲಿ ಪ್ರಮಾಣಪತ್ರ ಸ್ವರೂಪದಲ್ಲಿರುವ ಕ್ರಮಸಂಖ್ಯೆ 104686 ವಿಶ್ವವಿದ್ಯಾನಿಲಯಕ್ಕೆ ಸಮನಾಗಿರುವುದಿಲ್ಲ. ಸ್ವಪ್ನಾ ಸುರೇಶ್ ಎಂಬ ವಿದ್ಯಾರ್ಥಿನಿ ಆ ವರ್ಷ ಅಥವಾ ಮುಂದಿನ ವರ್ಷಗಳಲ್ಲಿ ಈ ವಿವಿಯಲ್ಲಿ ಓದಿಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕ ಯೋಗೇಶ್ ಪಾಟೀಲ್ ಕೂಡ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ.
ಏತನ್ಮಧ್ಯೆ, ಮಧ್ಯವರ್ತಿ ರಾಜೇಂದ್ರನ್ ತನ್ನ ಖಾತೆಯಿಂದ ಅಮೃತಸರದಲ್ಲಿರುವ ಆರೋಪಿಯ ಬ್ಯಾಂಕ್ ಖಾತೆಗೆ 32,000 ರೂ.ಗಳನ್ನು ಕಳುಹಿಸಿರುವ ಬಗ್ಗೆಯೂ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸಚಿನ್ ಅವರ ಬ್ಯಾಂಕ್ ಖಾತೆಯನ್ನು ಪೆÇಲೀಸರು ಸ್ಥಗಿತಗೊಳಿಸಿದ್ದಾರೆ. ಸ್ವಪ್ನಾ ಸುರೇಶ್ ಈ ಪ್ರಮಾಣ ಪತ್ರವನ್ನು ನಕಲಿಸಿ, ನಾಶಪಡಿಸಿದ್ದಾಳೆ ಎಂಬ ಆರೋಪದ ಮೇರೆಗೆ ಸ್ವಪ್ನಾ ವಿರುದ್ಧ ಐಪಿಸಿ 201ರ ಅಡಿ ಕೂಡ ಪ್ರಕರಣ ದಾಖಲಿಸಲಾಗಿದೆ. ಚಾರ್ಜ್ ಶೀಟ್‍ನಲ್ಲಿ ಹಲವಾರು ಸಾಕ್ಷಿ ಹೇಳಿಕೆಗಳು, ರಹಸ್ಯ ಹೇಳಿಕೆಗಳು ಮತ್ತು ವಿವಿಧ ಸ್ಥಳಗಳಿಂದ ವಶಪಡಿಸಿಕೊಂಡ ದಾಖಲೆಗಳು ಸೇರಿವೆ.
ಸ್ವಪ್ನಾ ಸುರೇಶ್ ಗೆ ನಕಲಿ ಪದವಿ; ಚಾರ್ಜ್ ಶೀಟ್ ಸಲ್ಲಿಕೆ
0
ನವೆಂಬರ್ 01, 2022