ಕಾಸರಗೋಡು: ಬದಿಯಡ್ಕದ ದಂತ ವೈದ್ಯ ಡಾ. ಕೃಷ್ಣಮೂರ್ತಿ ಸರ್ಪಂಗಳ(57)ನಿಗೂಢ ಸಾವಿನ ಪ್ರಕರಣ ಭೇದಿಸಲು ಬದಿಯಡ್ಕ ಪೊಲೀಸರೊಂದಿಗೆ ಕುಂದಾಪುರ ಪೊಲೀಸರೂ ಕೈಜೋಡಿಸಿದ್ದಾರೆ. ಕುಂದಾಪುರ ಪೊಲೀಸರು ಬದಿಯಡ್ಕ ಠಾಣೆಗೆ ಆಗಮಿಸಿ ಪ್ರಕರಣದ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಕುಂದಾಪುರ ಠಾಣೆ ಇನ್ಸ್‍ಪೆಕ್ಟರ್ ಗೋಪಿಕೃಷ್ಣ ಅವರ ನೇತೃತ್ವದಲ್ಲಿ ಮೂವರು ಎಸ್.ಐಗಳನ್ನೊಳಗೊಂಡ ಪೊಲೀಸರ ತಂಡ ಬದಿಯಡ್ಕ ತಲುಪಿ ಮಾಹಿತಿ ಸಂಗ್ರಹಿಸಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಅವರು ಡಾ. ಕೃಷ್ಣಮೂರ್ತಿ ಸಾವಿಗೆ ಸಂಬಂಧಿಸಿ ವಿಶೇಷ ತಂಡ ರಚಿಸಿದ್ದು, ಸಮಗ್ರ ತನಿಖೆ ನಡೆಸುತ್ತಿದೆ.
ದಂತ ವೈದ್ಯರ ನಿಗೂಢ ಸಾವು: ಬದಿಯಡ್ಕದಲ್ಲಿ ಮಾಹಿತಿ ಸಂಗ್ರಹಿಸಿದ ಕುಂದಾಪುರ ಪೊಲೀಸರು
0
ನವೆಂಬರ್ 16, 2022