ಕಾಸರಗೋಡು: ಗುಡ್ಡಗಾಡು ಭಾಗದ ಬಹುದಿನಗಳ ಕನಸಾಗಿರುವ ವೆಸ್ಟ್ ಎಳೇರಿ ಪಂಚಾಯಿತಿ ವ್ಯಾಪ್ತಿಯ ಕಾಲಿಕಡವ್ ಸೇತುವೆ ಕಾಮಗಾರಿಗೆ ಶಾಸಕ ಎಂ.ರಾಜಗೋಪಾಲನ್ ಶಂಕುಸ್ಥಾಪನೆ ನೆರವೇರಿಸಿದರು. ಚೈತ್ರವಾಹಿನಿ ನದಿಗೆ ಕಾಲಿಕಡವ್ ನಲ್ಲಿ ಸೇತುವೆ ನಿರ್ಮಿಸಬೇಕು ಎಂಬುದು ಸ್ಥಳೀಯರ ಬಹುದಿನಗಳ ಬೇಡಿಕೆ.
ಇದರ ಬೆನ್ನಲ್ಲೇ ಶಾಸಕ ಎಂ.ರಾಜಗೋಪಾಲನ್ ಮೊದಲ ಅವಧಿಯಲ್ಲಿ ಬಜೆಟ್ ನಲ್ಲಿ ಸೇರ್ಪಡೆ ಮಾಡಿ ಸೇತುವೆ ನಿರ್ಮಾಣಕ್ಕೆ ಕಿಪ್ಬಿಯಲ್ಲಿ ಹಣ ಮಂಜೂರು ಮಾಡಿದರು. ಮೊದಲ ಹಂತದ ಕಾಮಗಾರಿಯಾಗಿ ಕಾಲಿಕಡವ್ ಸೇತುವೆಗೆ 3.77 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಯೋಜನೆಯು 30ಮೀ ಉದ್ದದ ಎರಡು ಸ್ಪ್ಯಾನ್‍ಗಳು, 200ಮೀ ಅಪೆÇ್ರೀಚ್ ರಸ್ತೆ, ಎರಡೂ ಬದಿಗಳಲ್ಲಿ 1ಮೀ ಪಾದಚಾರಿ ಮಾರ್ಗ ಮತ್ತು 7ಮೀ ಅಗಲದ ಟಾರಿಂಗ್ ಅನ್ನು ಒಳಗೊಂಡಿದೆ.
ವೆಸ್ಟ್ ಎಳೇರಿ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವಿಜಯನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ. ಸಜಿತ್ ವರದಿ ಮಂಡಿಸಿದರು. ಪಂಚಾಯಿತಿ ಸದಸ್ಯರಾದ ಮೋಳಿಕುಟ್ಟಿ ಪೌಲ್, ಸಿ.ವಿ.ಅಖಿಲಾ, ಟಿ.ವಿ. ರಾಜೀವನ್, ನಿರ್ಮಾಣ ಸಮಿತಿ ಅಧ್ಯಕ್ಷ ಪಿ.ಆರ್. ಚಾಕೋ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಟಿ.ಕೆ.ಸುಕುಮಾರನ್, ಎ.ಸಿ.ಜೋಸ್, ಕೆ.ಪಿ.ಸಹದೇವನ್, ಜತಿಲ್ ಅಸೈನಾರ್, ಶಾಜಿ ವೆಲ್ಲಂಕುನ್ನಿಲ್, ಕೆ.ಜೆ. ವಕಿಲುಪಸ್ಥಿತರಿದ್ದು ಮಾತನಾಡಿದರು. ಕಾರ್ಯಪಾಲಕ ಅಭಿಯಂತರ ಎ.ಪ್ರದೀಪ್ ಕುಮಾರ್ ಸ್ವಾಗತಿಸಿ, ಸಹಾಯಕ ಅಭಿಯಂತರ ಸಿ.ಜಿ. ರವೀಂದ್ರನ್ ವಂದಿಸಿದರು.
ಕಾಲಿಕಡವ್ ಸೇತುವೆಗೆ ಶಂಕುಸ್ಥಾಪನೆ
0
ನವೆಂಬರ್ 25, 2022
Tags