ಪೆರ್ಲ: ಚೆರ್ಕಳದ ಜಿಎಚ್ಎಸ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಐಟಿ ಮೇಳದ ಸ್ಕ್ರಾಚ್ ಪೆÇ್ರೀಗ್ರಾಮಿಂಗ್ ಸ್ಪರ್ಧೆಯಲ್ಲಿ ಶೇಣಿ ಶ್ರೀ ಶಾರದಾಂಬ ಪ್ರೌಢ ಶಾಲೆಯ ವಿದ್ಯಾರ್ಥಿನಿ ತಸೀನ ತಸ್ನಿಮ್ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಶೇಣಿ ಶ್ರೀ ಶಾರದಾಂಬ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಸೂರಂಬೈಲಿನ ಆಶ್ರಫ್ ಎ.ಜಿ.-ಸೌದತ್ ಕೆ.ಪಿ.ದಂಪತಿಗಳ ಪುತ್ರಿಯಾಗಿದ್ದು ಶಾಲಾ ಆಡಳಿತ ಸಮಿತಿ ಹಾಗೂ ಶಿಕ್ಷಕ ರಕ್ಷಕ ಸಂಘ ಅಭಿನಂದಿಸಿದೆ.
ಶೇಣಿ ಶಾಲಾ ವಿದ್ಯಾರ್ಥಿನಿ ಸ್ಕ್ರಾಚ್ ಪೆÇ್ರೀಗ್ರಾಮಿಂಗ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
0
ನವೆಂಬರ್ 04, 2022
Tags