ಕಾಸರಗೋಡು: ಜಿಲ್ಲೆಯ ಕಾಸರಗೋಡು, ಬೇಕಲ, ಆದೂರು, ಹೊಸದುರ್ಗ ಮತ್ತು ಚೀಮೇನಿ ಪೆÇಲೀಸ್ ಠಾಣೆಗಳ ವಿಭಾಗೀಯ ಅಧಿಕಾರಿಗಳನ್ನು ತಮ್ಮ ಕಾರ್ಯನಿರ್ವಹಣೆಗಾಗಿ ಪುರಸ್ಕರಿಸುವಂತೆ ರಾಜ್ಯ ಪೆÇಲೀಸ್ ನಿರ್ದೇಶಕ ಅನಿಲ್ ಕಾಂತ್ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಶಿಫಾರಸು ಮಾಡಿದ್ದಾರೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಡಿಜಿಪಿ ಸೂಚನೆ ಮೇರೆಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಈ ಅಹವಾಲು ಸಲ್ಲಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಕಾಸರಗೋಡು ಮತ್ತು ಬೇಕಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ದಂಧೆ ತಡೆ ಹಾಗೂ ಆದೂರು ಪೆÇಲೀಸ್ ಠಾಣೆಯಲ್ಲಿ ಕೋಮು ಉದ್ವಿಗ್ನತೆ ರಹಿತವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಹಾಗೂ ವಂಚನೆ ಪ್ರಕರಣಗಳನ್ನು ಬೆಳಕಿಗೆ ತಂದಿರುವುದಕ್ಕಾಗಿ ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಖೋಜದುರ್ಗ ಪೆÇಲೀಸ್ ಠಾಣೆಯಲ್ಲಿ ಉತ್ತಮ ಕಾನೂನು ಜಾರಿ ಮತ್ತು ಮಾದಕ ದ್ರವ್ಯ ತಡೆ ಕಾರ್ಯಾಚರಣೆಗೆ ಸಂಬಂಧಿಸಿ ಹಾಗೂ ವಿವಿಧ ಪ್ರಕರಣಗಳನ್ನು ವಿಚಾರಣೆ ನಡಸಿ, ಆರೋಪಿಗಳನ್ನು ತ್ವರಿತವಾಗಿ ಬಂಧಿಸಲು ಮತ್ತು ಸೂಕ್ತ ಶಿಕ್ಷೆ ಖಚಿತಪಡಿಸಿಕೊಳ್ಳಲು ಕೈಗೊಂಡ ಕಠಿಣ ಕ್ರಮಗಳಿಗಾಗಿ ಚೀಮೇನಿ ಪೆÇಲೀಸ್ ಠಾಣೆಗೆ ಪ್ರಶಸ್ತಿ ನೀಡಲು ಶಿಫಾರಸು ಮಾಡಲಾಗಿದೆ.
ಅತ್ಯುತ್ತಮ ಪೋಲೀಸ್ ಠಾಣೆಗಳಿಗೆ ಪ್ರಶಸ್ತಿ-ಡಿಜಿಪಿಗೆ ಶಿಫಾರಸು
0
ನವೆಂಬರ್ 24, 2022
Tags