HEALTH TIPS

G-20 ಲಾಂಛನದಲ್ಲಿ ಬಿಜೆಪಿಯ ಕಮಲ ಆಘಾತಕಾರಿ: ಕಾಂಗ್ರೆಸ್‌

 

              ನವದೆಹಲಿ: ಬಿಜೆಪಿಯ ಚುನಾವಣಾ ಚಿಹ್ನೆ ಕಮಲವನ್ನು ಜಿ20 ಲಾಂಛನದ ಭಾಗವಾಗಿಸಿರುವುದು ಆಘಾತಕಾರಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷವು ವೈಯಕ್ತಿಕ ಪ್ರಚಾರಕ್ಕೆ ಯಾವುದೇ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಬುಧವಾರ ಟೀಕಿಸಿದೆ.

               ಈ ಬಾರಿಯ ಜಿ-20 ಅಧ್ಯಕ್ಷತೆ ವಹಿಸುವ ಅವಕಾಶ ಭಾರತಕ್ಕೆ ಲಭಿಸಿದ ಹಿನ್ನೆಲೆಯಲ್ಲಿ ಜಿ20 ಲಾಂಛನ, ಧ್ಯೇಯ ವಾಕ್ಯ ಹಾಗೂ ವೆಬ್‌ಸೈಟ್‌ ಅನ್ನು ಪ್ರಧಾನಿ ಮೋದಿ ಅವರು ಅನಾವರಣಗೊಳಿಸಿದ ಮರು ದಿನವೇ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.

                  ಕಾಂಗ್ರೆಸ್‌ ಟೀಕೆಗೆ ಎದಿರೇಟು ನೀಡಿರುವ ಬಿಜೆಪಿ, ಕಾಂಗ್ರೆಸ್‌ ನೇತೃತ್ವದ ಸರ್ಕಾರವಿರುವಾಗಲೇ 1950ರಲ್ಲಿ ಕಮಲವನ್ನು ರಾಷ್ಟ್ರೀಯ ಪುಷ್ಪವೆಂದು ಘೋಷಿಸಲಾಗಿದೆ. ಇಷ್ಟೊಂದು ಹಳೆಯದಾದ ಪಕ್ಷವು ಪ್ರತಿಯೊಂದು ರಾಷ್ಟ್ರೀಯ ಲಾಂಛನದ ಬಗ್ಗೆ ಏಕೆ ಇಷ್ಟೊಂದು ಕೀಳಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದೆ.

                'ಜಿ20 ಲಾಂಛನವು ದೇಶದ ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಮತ್ತು ನೀಲಿ ಬಣ್ಣಗಳಿಂದ ಪ್ರೇರಣೆ ಪಡೆದಿದೆ. ಇದು ಭಾರತದ ರಾಷ್ಟ್ರೀಯ ಪುಷ್ಪ ಕಮಲದೊಂದಿಗೆ ಭೂಗ್ರಹವನ್ನು, ಸವಾಲುಗಳ ಮಧ್ಯೆ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

                '70 ವರ್ಷಗಳ ಹಿಂದೆ, ಕಾಂಗ್ರೆಸ್ ಧ್ವಜವನ್ನು ದೇಶದ ಧ್ವಜವನ್ನಾಗಿಸುವ ಪ್ರಸ್ತಾಪವನ್ನು ನೆಹರೂ ತಿರಸ್ಕರಿಸಿದರು. ಈಗ, ಬಿಜೆಪಿಯ ಚುನಾವಣಾ ಚಿಹ್ನೆಯು (ಕಮಲ) ಜಿ20ರ ಭಾರತದ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತ ಲಾಂಛನವಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

                  ಬಿಜೆಪಿ ವಕ್ತಾರ ಶೆಹ್ಜಾದ್‌ ಪೂನಾವಾಲಾ ಅವರು ಕೂಡ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದು, 'ದೇವತೆ ಲಕ್ಷ್ಮೀ ಕೂಡ ಆಸೀನವಾಗಿರುವುದು ರಾಷ್ಟ್ರೀಯ ಪುಷ್ಪ ಕಮಲದ ಮೇಲೆಯೇ. ನಮ್ಮ ರಾಷ್ಟ್ರೀಯ ಹೂವನ್ನು ನೀವು ವಿರೋಧಿಸುತ್ತಿದ್ದೀರಾ' ಎಂದು ಪ್ರಶ್ನಿಸಿದ್ದಾರೆ.

             ಜೈರಾಮ್‌ ರಮೇಶ್‌ ಅವರ ಟ್ವಿಟರ್‌ ಹೇಳಿಕೆಯ ಟೀಕೆಗೆ ಎದಿರೇಟು ನೀಡಿರುವ ಅವರು, ಮಾಜಿ ಪ್ರಧಾನಿ ರಾಜೀವ್‌ (ರಾಜೀವ ಪದದ ಅರ್ಥವೂ ಕಮಲವೇ) ಗಾಂಧಿ, ಕಾಂಗ್ರೆಸ್‌ ಹಿರಿಯ ನಾಯಕ ಕಮಲ್ ನಾಥ್‌ ಅವರ ಹೆಸರುಗಳಲ್ಲಿ ಕಮಲದ ಅರ್ಥವೇ ಇದೆ. ಹಾಗಾದರೆ ಅವರ ಹೆಸರುಗಳಲ್ಲಿರುವ 'ಕಮಲ'ವನ್ನೂ ಕಿತ್ತೆಸೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries