ಮಂಗಳೂರು: ಇತ್ತೀಚೆಗೆ ಆರೋಪಿ ಶಾರಿಕ್ ಇಸ್ಲಾಮಿಕ್ ಸ್ಟೇಟ್ಸ್ ಮಾದರಿಯಲ್ಲೇ ಕುಕ್ಕರ್ ಬಾಂಬ್ ಹಿಡಿದು ನಿಂತ ಫೋಟೊ ಒಂದು ವೈರಲ್ ಆಗಿತ್ತು. ಶಾರೀಕ್ ಕೈಯಲ್ಲಿದ್ದ ಬಾಂಬ್ಗೆ ಇಡೀ ಬಸ್ ಸ್ಫೋಟ ಮಾಡುವ ಸಾಮರ್ಥ್ಯ ಇತ್ತು ಎನ್ನುವ ಮಾಹಿತಿಯೂ ಬಹಿರಂಗಗೊಂಡಿತ್ತು.
ಇದೀಗ ಈ ಘಟನೆಯ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಳಿದಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಶಾರೀಕ್ನನ್ನು ಬೆಂಬಲಿಸಿ ಇದೀಗ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ಅದರ ಜೊತೆಗೆ ಆತನ ಬಂಧನಕ್ಕೆ ಪ್ರತೀಕಾರವನ್ನೂ ತೆಗೆದುಕೊಳ್ಳುತ್ತೇವೆ ಎನ್ನುವ ರೀತಿಯ ಹೇಳಿಕೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ನೀಡಿತ್ತು.
ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಪ್ರಕರಣದ ಸಂಪೂರ್ಣ ತನಿಖೆ NIAಗೆ ಹಸ್ತಾಂತರ ಮಾಡಲಅಗುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಸದ್ಯ NIAಯ ದೆಹಲಿ ಬ್ರಾಂಚ್ ನಲ್ಲಿ ಪ್ರಕರಣ ದಾಖಲಾಗಿದ್ದು ಶಂಕಿತ ಉಗ್ರ ಶಾರೀಕ್ ವಿರುದ್ಧ UAPA ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.