ಕೋಲ್ಕತಾ: ಕೆಲಸದ ಒತ್ತಡ ಇರುತ್ತದೆ… ಹಾಗಂತ ಮದುವೆ ಗಂಡಿದೆ ತನ್ನ ಮದುವೆಯ ದಿನವೂ ಕೆಲಸದ ಒತ್ತಡ ಇದ್ದೀತೇ? ಹೀಗೊಂದು ಪ್ರಶ್ನೆ ಸಹಜವಾಗಿ ಮೂಡಲು ಕಾರಣ, ವೈರಲ್ ಆಗಿರುವ ಈ ಫೋಟೋ. ಈ ಫೋಟೋದಲ್ಲಿ ಮದುವೆ ಗಂಡು ತನ್ನ ಮದುವೆಯ ದಿನ, ಕಾಲ ಮೇಲೆ ಲ್ಯಾಪ್ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿರುವುದನ್ನು ಕಾಣಬಹುದು.
ಇದೀಗ ಈ ಫೋಟೋ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ಕೆಲವು ಕಂಪೆನಿಗಳು ಅಗತ್ಯ ಸಂದರ್ಭದಲ್ಲಿ ತನ್ನ ಉದ್ಯೋಗಿಗೆ ರಜೆ ನೀಡುವುದಿಲ್ಲ. ಆದರೆ ಮದುವೆ ಎಂಬ ಕಾರಣ ನೀಡಿದರೆ ಎಂತಹ ಕಠಿಣ ಸಂದರ್ಭದಲ್ಲಾದರೂ ಉದ್ಯೋಗಿಗೆ ರಜೆ ಸಿಗುತ್ತದೆ. ಆದರೆ ಈತ ಮಾತ್ರ, ತನ್ನ ಮದುವೆ ಶಾಸ್ತ್ರ ನಡೆಯುತ್ತಿದ್ದರು ಲ್ಯಾಪ್ಟ್ಯಾಪ್ ಮೂಲಕ ಕೆಲಸ ಮಾಡುತ್ತಿದ್ದಾನೆ.
ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಆಗಿರುವ ಈ ಫೋಟೋವನ್ನು ಗಮನಿಸಿದಾಗ ಇದು, ಕೋಲ್ಕತಾದಲ್ಲಿ ನಡೆದ ವಿವಾಹ ಕಾರ್ಯಕ್ರಮ ಎಂಬುದು ತಿಳಿಯುತ್ತದೆ. ಇದನ್ನು ನೋಡಿದ ಅನೇಕರು, ಪಾಪ… ಮದುವೆ ಗಂಡಿನ ತನ್ನ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು, ಈ ಫೋಟೋ ಮದುವೆ ಗಂಡಿನ ಕಾರ್ಯಕ್ಷಮತೆಗೆ ಸಾಕ್ಷಿಯಾದಂತಿದೆ ಎಂದಿದ್ದಾರೆ.