ತುಂಬಾ ಸೆಲೆಬ್ರಿಟಿಗಳು ತಮ್ಮ ಬೆಳಗಿನ ದಿನಚರಿಯನ್ನು ಒಂದು ಲೋಟ ಬಿಸಿ ನೀರಿಗೆ 1
ಚಮಚ ಶುದ್ಧ ದೇಸಿ ತುಪ್ಪ ಅಥವಾ ತೆಂಗಿನೆಣ್ಣೆ ಸೇರಿಸಿ ಕುಡಿಯುವ ಮೂಲಕ
ಪ್ರಾರಂಭಿಸುತ್ತಾರೆ. ಏಕೆಂದರೆ ಅವರ ನ್ಯೂಟ್ರಿಷಿಯನಿಸ್ಟ್ ಅವರಿಗೆ ಈ ಬಗ್ಗೆ
ಹೇಳಿರುತ್ತಾರೆ.
ನಮ್ಮ ದೇಹದ ಕಾರ್ಯಕ್ಕೆ ಕೊಬ್ಬಿನಂಶ ಅವಶ್ಯಕ, ಆರೋಗ್ಯಕರ ಕೊಬ್ಬಿನಂಶದ ದೇಹದ
ಜೀರ್ಣಾಂಗ ವ್ಯವಸ್ಥೆ ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿಕೊಂಡು ಹೋಗುವಂತೆ
ಮಾಡುತ್ತದೆ. ಆರೋಗ್ಯಕರ ಕೊಬ್ಬಿನಂಶ ಎಂದರೆ ಮೊದಲ ಎರಡು ಆಯ್ಕೆಯೆಂದರೆ ತುಪ್ಪ ಹಾಗೂ
ತೆಂಗಿನೆಣ್ಣೆ.
ತುಪ್ಪ ಹಾಗೂ ತೆಂಗಿನೆಣ್ಣೆಯ ಪರಿಣಾಮ ಹಾಗೂ ಅಡ್ಡಪರಿಣಾಮಗಳ ಬಗ್ಗೆ ತಿಳಿಯೋಣ:
ತೆಂಗಿನೆಣ್ಣೆ
ತೆಂಗಿನೆಣ್ಣೆ ಉರಿಯೂತ ಕಡಿಮೆ ಮಾಡುವ, ಫಂಗಲ್ ಸೋಂಕು ತಡೆಗಟ್ಟುವ ಗುಣವನ್ನು
ಹೊಂದಿದೆ, ಇದಲ್ಲದೆ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರ. ತೂಕ ಇಳಿಕೆ, ಕೂದಲು ಹಾಗೂ
ತ್ವಚೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.
ಯಾರಿಗೆ ತೆಂಗಿನೆಣ್ಣೆ ಒಳ್ಳೆಯದಲ್ಲ
* ಯಾರು ತುಂಬಾ ಕಡಿಮೆ ತೂಕ ಹೊಂದಿರುತ್ತಾರೋ ಅವರಿಗೆ ತೆಂಗಿನೆಣ್ಣೆ ಸೂಕ್ತವಲ್ಲ,
ಏಕೆಂದರೆ ತೂಕ ಕಡಿಮೆ ಇರುವವರು ತೆಂಗಿನೆಣ್ಣೆ ತೆಗೆದುಕೊಂಡರೆ ಚಯಪಚಯ ಕ್ರಿಯೆ ಮತ್ತಷ್ಟು
ವೇಗವಾಗಿ ನಡೆಯುವುದು. ಉಳಿದವರಿಗೆ ತೆಂಗಿನೆಣ್ಣೆ ಒಳ್ಳೆಯದು, ಅದರಲ್ಲೂ ಹೈಪೋ
ಥೈರಾಯ್ಡ್ ಸಮಸ್ಯೆ ಇರುವವರಿಗೆ ತೆಂಗಿನೆಣ್ಣೆ ತುಂಬಾನೇ ಪ್ರಯೋಜನಕಾರಿ.
ತುಪ್ಪ
ತುಪ್ಪದಲ್ಲಿ ವಿಟಮಿನ್ ಎ, ಡಿ ಮತ್ತು ಕೆ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ತುಪ್ಪ ಕೂಡ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿಯಾಗಿದೆ.
ಯಾರಿಗೆ ತುಪ್ಪ ಒಳ್ಳೆಯದಲ್ಲ
ಯಾರಿಗೆ ಜೀರ್ಣಕ್ರಿಯೆ ಶಕ್ತಿ ಕಡಿಮೆ ಇರುತ್ತದೋ ಅವರು ತುಪ್ಪ ಸೇವಿಸಿದರೆ ಜೀರ್ಣಕ್ರಿಯೆಗೆ ಕಷ್ಟವಾಗುವುದು. ಉಳಿದಂತೆ ತುಪ್ಪನೂ ಆರೋಗ್ಯಕರ.
ತುಪ್ಪ VS ತೆಂಗಿನೆಣ್ಣೆ
ತುಪ್ಪ ಹಾಗೂ ತೆಂಗಿನೆಣ್ಣೆ ಎರಡೂ ಕೂಡ ಆರೋಗ್ಯಕರ ಆದರೆ ತೆಂಗಿನೆಣ್ಣೆಯನ್ನು ನೀವು
ಬೆಳಗ್ಗೆ ಹಾಗೆಯೇ ಒಂದು ಚಮಚ ಬಾಯಿಗೆ ಹಾಕಬಹುದು, ಆದರೆ ತುಪ್ಪ ಕಷ್ಟ ಅನಿಸಬಹುದು. ನೀವು
ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ತೆಂಗಿನೆಣ್ಣೆಯ ಆಯ್ಕೆ ಉತ್ತಮವಾಗಿದೆ.