ತಿರುವನಂತಪುರಂ: ರಾಜ್ಯದಲ್ಲಿ ಇಂದಿನಿಂದ ಮದ್ಯದ ಬೆಲೆಯಲ್ಲಿ ಏರಿಕೆಯಾಗಿದೆ. 10ರಿಂದ 20 ರೂ.ಗೆ ಏರಿಕೆಯಾಗಿದೆ. ಜವಾನ್ ಮದ್ಯ 10 ರೂಪಾಯಿ ಏರಿಕೆಯಾಗಿ 610 ರೂಪಾಯಿಗೆ ತಲುಪಿದೆ.
ಎಂ.ಎಚ್. ಬ್ರ್ಯಾಂಡ್ ರೂ.1020 ರಿಂದ ರೂ.1040 ಹೆಚ್ಚಳವಾಗಿದೆ. ನಾಳೆಯಿಂದ ಬಿಯರ್ ಮತ್ತು ವೈನ್ ಬೆಲೆ ಏರಿಕೆಯಾಗಲಿದೆ. ನಿನ್ನೆ, ಗವರ್ನರ್ ಆರಿಫ್ ಮುಹಮ್ಮದ್ ಖಾನ್ ಅವರು ಭಾರತೀಯ ನಿರ್ಮಿತ ವಿದೇಶಿ ಮದ್ಯದ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ ನಾಲ್ಕು ರಷ್ಟು ಹೆಚ್ಚಿಸುವ ತಿದ್ದುಪಡಿ ಮಸೂದೆಗೆ ಸಹಿ ಹಾಕಿದರು. ಇಂದು ಅಧಿಸೂಚನೆ ಹೊರಬಿದ್ದ ಗಂಟೆಗಳಲ್ಲೇ ಬೆಲೆ ಏರಿಕೆ ಜಾರಿಗೆ ಬಂದಿದೆ.
ಮದ್ಯದ ಕಂಪನಿಗಳಿಗೆ ವಿಧಿಸಲಾಗಿದ್ದ ಮಾರಾಟ ತೆರಿಗೆಯನ್ನು ಸರ್ಕಾರ ಮನ್ನಾ ಮಾಡಿತ್ತು. ಇದರ ಬೆನ್ನಲ್ಲೇ ಬಿವರೇಜಸ್ ಕಾಪೆರ್Çರೇಷನ್ ಗೆ 195 ಕೋಟಿ ಆದಾಯ ನಷ್ಟವಾಗಲಿದೆ. ಇದನ್ನು ಪರಿಹರಿಸುವ ಭಾಗವಾಗಿ ಮಾರಾಟ ತೆರಿಗೆಯನ್ನು ಹೆಚ್ಚಿಸಿ ಮಸೂದೆ ಮಂಡಿಸಲಾಗಿದೆ. ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗಿತ್ತು.
ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆ; 10 ರಿಂದ 20 ರೂ.ಗೆ ಹೆಚ್ಚಳ: ನಶೆ ದುಬಾರಿ
0
ಡಿಸೆಂಬರ್ 17, 2022