ಕಾಸರಗೋಡು: ಶೈಕ್ಷಣಿಕ ಅರ್ಹತೆಯ ಯೋಗ್ಯತೆ ಇದ್ದು ಉದ್ಯೋಗ ಲಭಿಸದ, ಉದ್ಯೋಗಕ್ಕೆ ಅನುಕೂಲಕರ ಪರಿಸ್ಥಿತಿಗಳನ್ನು ಹೊಂದಿರದ ಮಹಿಳೆಯರಿಗಾಗಿ 'ಉದ್ಯೋಗ ರಂಗಕ್ಕೆ'ಎಂಬ ಯೋಜನೆಯೊಂದಿಗೆ ಕೇರಳ ನಾಲೆಡ್ಜ್ ಎಕಾನಮಿ ಮಿಷನ್ ವಿದ್ಯಾವಂತ ಮಹಿಳೆಯರಿಗೆ ಖಾಸಗಿ ಉದ್ಯೋಗ ರಂಗದಲ್ಲಿ 2 ತಿಂಗಳಲ್ಲಿ ಗರಿಷ್ಠ ಉದ್ಯೋಗಾವಕಾಶ ಒದಗಿಸಿಕೊಡುವ ಗುರಿಯಿರಿಸಿದೆ. ಮೊದಲ ಹಂತದ ಚಟುವಟಕೆಯು ಡಿಸೆಂಬರ್‍ನಲ್ಲಿ ಆರಂಭಿಸಿ 2023 ಮಾರ್ಚ್ 8 ರಂದು ಕೊನೆಗೊಳ್ಳಲಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಯೋಜನೆ ಅನುಷ್ಠಾನ ಗೊಳ್ಳಲಿದೆ. ಪ್ರಾದೇಶಿಕ ಮಟ್ಟದಲ್ಲಿ ವಿದ್ಯಾವಂತ ಮಹಿಳೆಯರನ್ನು ಒಟ್ಟುಸೇರಿಸಿ ಗುಂಪು ರಚಿಸಲಾಗುವುದು. ಸಮುದಾಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವ ಸಿಡಿಎಸ್ ಸದಸ್ಯರು ಇದರ ನೇತೃತ್ವ ವಹಿಸಲಿದ್ದಾರೆ.
ನಾಲೆಡ್ಜ್ ಎಕಾನಮಿ ಮಿಷನ್ ತಯಾರಿಸಿದ ಡಿಜಿಟಲ್ ಮ್ಯಾನೇಜ್‍ಮೆಂಟ್ ವರ್ಕ್‍ಫೆÇೀರ್ಸ್ ಸಿಸ್ಟಮ್ (ಡಿ ಡಬ್ಲ್ಯೂ ಎಂ ಎಸ್) ಎಂಬ ವೆಬ್ ಪೆÇೀರ್ಟಲ್ ನಲ್ಲಿ ನೋಂದಾಯಿಸಿದ, ನೋಂದಾವಣೆ ಮಾಡದ ಉದ್ಯೋಗಾಕಾಂಕ್ಷಿ ಸ್ತ್ರೀಯರು, ನೋಂದಾಯಿತ ಮಹಿಳಾ ಉದ್ಯೋಗಾಕಾಂಕ್ಷಿಗಳು, ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ ಮತ್ತು ಮೀನುಗಾರಿಕಾ ಸಮುದಾಯದ, ವಿಕಲಚೇತನ ಮಹಿಳೆಯರು ಮತ್ತು ಟ್ರಾನ್ಸ್‍ಜೆಂಡರ್ ಎಂಬೀ ವಿಭಾಗದವರು ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಜಿಲ್ಲೆಯ ಎಲ್ಲಾ ಪಂಚಾಯಿತಿ ಹಾಗೂ ನಗರಸಭೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಇದಕ್ಕಾಗಿ ಸ್ಥಳೀಯಾಡಳಿತ ಸಂಸ್ಥೆಗಳು, ವಿವಿಧ ಸರ್ಕಾರಿ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಉದ್ಯೋಗದಾತರಾಗಿರುವ ಖಾಸಗಿ ಸಂಸ್ಥೆಗಳು ಯಾ ವ್ಯಕ್ತಿಗಳನ್ನು ಯೋಜನೆಯೊಂದಿಗೆ ಸಂಯೋಜಿಸಲಾಗುತ್ತದೆ.