ಕುಂಬಳೆ: ಭಾರತ್ ಜೊಡೋ ಯಾತ್ರೆ 100 ದಿನ ಸಂಭ್ರಮ ಮತ್ತು ಬಾಂಗ್ಲಾದೇಶ ವಿಮೋಚನಾ ಸಮರ ವಿಜಯ 51ನೇ ಸಂಭ್ರಮ ಕುಂಬಳೆ ಪೇಟೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಮಂಜೇಶ್ವರ ತಾಲೂಕು ಸಮಿತಿ ಸಿಹಿ ಹಂಚುವ ಮೂಲಕ ಆಚರಿಸಿತು.
ಭಾರತದ ದೇಶದ ಅಖಂಡತೆಗಾಗಿ ಸೌಹಾರ್ಧತೆಗೋಸ್ಕರ ರಾಹುಲ್ ಗಾಂಧಿಯ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ 100ದಿನಗಳಲ್ಲಿ ರಾಹುಲ್ ಗಾಂಧಿ ಎಂಬ ಹೋರಾಟಗಾರನ ಕೆಚ್ಚು ಸಾಹಸ ಮತ್ತು ದೇಶಪ್ರೇಮವನ್ನು ದೇಶಕ್ಕೆಲ್ಲ ತೋರಿಸಿದೆ. ಹಾಗೆ ಬಾಂಗ್ಲಾದೇಶ ವಿಮೋಚನ ಸಮರದಲ್ಲಿ ಇಂದಿರಾಗಾಂಧಿಯವರು ದೇಶವನ್ನು ವಿಜಯದ ಪತಾಕೆ ಹಾರಿಸುವಂತೆ ಮಾಡಿದ್ದನ್ನು ಇಂದಿನ ಯುವ ಜನತೆ ಮರೆಯಬಾರದೆಂದು ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಮಂಜುನಾಥ್ ಆಳ್ವ ಮಡ್ವ ತಿಳಿಸಿದರು.
ಯುವ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ನಡೆದ ಸಂಭ್ರಮಾಚರಣೆಯ ಅಧ್ಯಕ್ಷತೆಯನ್ನು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜುನೈದ್ ಉರ್ಮಿ ವಹಿಸಿದ್ದರು. ಕುಂಬಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಪ್ರಭು, ಕುಂಬಳೆ ಮಂಡಲ ಅಧ್ಯಕ್ಷ ರವಿ ಪೂಜಾರಿ, ಕುಂಬಳೆ ಪಂಚಾಯತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಕಾಂಗ್ರೆಸ್ಸಿನ ಹಿರಿಯ ನಾಯಕರಾದ ರಾಮ ಕಾರ್ಲೆ, ಯುವ ಕಾಂಗ್ರೆಸ್ಸಿನ ಜಿಲ್ಲಾ ಸಮಿತಿ ಕಾರ್ಯದರ್ಶಿÀ ಶರೀಲ್ ಕೈಯಂಕುಡೆಲ್, ಪಂಚಾಯತಿ ಸದಸ್ಯರಗಳಾದ ರವಿರಾಜ್, ಕೇಶವ ಪುತ್ತಿಗೆ, ಐಕ್ಯ ರಂಗದ ಅಂಗ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂಲೀಗಿನ ಅಬ್ಬಾಸ್, ರೆಹಮಾನ್, ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಕಾರ್ಮಿಕ ಕಾಂಗ್ರೆಸ್ಸಿನ ನೇತಾರುಗಳಾದ ಸಲೀಂ ಪುತ್ತಿಗೆ, ಬಾಲಕೃಷ್ಣ ಬಿ.ಕೆ. ಬಾಡೂರು, ರಾಕೇಶ್ ರೈ ಕಿದೂರು, ರಫೀಕ್ ಕುಂಟಾರು, ರಕೀಬ್ ಪುತ್ತಿಗೆ, ಹನೀಫ್ ಮಂಜೇಶ್ವರ, ಬಾಲಕೃಷ್ಣ ಶೆಟ್ಟಿ ಕಿದೂರು, ಖಮರುದ್ದಿನ್ ಪಾಡ್ಲಡ್ಕ, ರಮೇಶ್ ಗಾಂಧಿನಗರ, ಮುಸ್ತಫಾ ಕೊಪ್ಪಳ, ಶರೋನ್ ಪೈವಳಿಕೆ, ಮಹಮದ್ ಎಕೆಜಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಧನ್ಯ ರಾಜ್ ಕುಂಟಂಗೇರಡ್ಕ ಎಂಬವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ತತ್ವ ಸಿದ್ಧಾಂತ ಮತ್ತು ರಾಹುಲ್ ಗಾಂಧಿಯವರ ನೇತೃತ್ವದಿಂದ ಪ್ರಭಾವಿತರಾಗಿ ಕಾಂಗ್ರೆಸ್ ಸದಸ್ಯತನವನ್ನು ಲಕ್ಷ್ಮಣ ಪ್ರಭು ಅವರಿಂದ ಪಡೆದುಕೊಂಡರು. ಮಂಜುನಾಥ್ ಆಳ್ವ ಶಾಲು ಹೊದೆಸಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಯುವ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಪೃಥ್ವಿರಾಜ ಶೆಟ್ಟಿ ಕುಂಬಳೆ ಸ್ವಾಗತಿಸಿ, ಸಮಿತಿ ಕಾರ್ಯದರ್ಶಿ ದಯಾನಂದ ಬಾಡೂರು ವಂದಿಸಿದರು.
ಭಾರತ್ ಜೋಡೋ ಯಾತ್ರೆ-100: ಮಂಜೇಶ್ವರ ತಾಲೂಕು ಸಮಿತಿಯಿಂದ ಸಂಭ್ರಮಾಚರಣೆ
0
ಡಿಸೆಂಬರ್ 17, 2022