HEALTH TIPS

ಈ ವರ್ಷ ಭಾರತದಲ್ಲಿನ ವಂಚಕರ ಜಾಲದಿಂದ ಸುಮಾರು 10 ಶತಕೋಟಿ ಡಾಲರ್ ಕಳೆದುಕೊಂಡ ಅಮೆರಿಕನ್ನರು: ವರದಿ

              ವದೆಹಲಿ : ಭಾರತದಿಂದ ಕಾರ್ಯಾಚರಿಸುತ್ತಿರುವ ವಂಚಕರಿಂದ ಮೋಸ ಹೋಗಿರುವ ಅಮೆರಿಕಾ ಪ್ರಜೆಗಳು 2022ರ ಅವಧಿಯಲ್ಲಿ ಸುಮಾರು 10 ಶತಕೋಟಿ ಡಾಲರ್ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

                   ಸಂತ್ರಸ್ತರ ಪೈಕಿ ಬಹುತೇಕರು ವಯೋವೃದ್ಧರಾಗಿದ್ದು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅವರಿಗೆ 3 ಶತಕೋಟಿ ಡಾಲರ್‌ಗೂ ಹೆಚ್ಚು ಮೊತ್ತವನ್ನು ವಂಚಿಸಲಾಗಿದೆ ಎಂಬ ಸಂಗತಿ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (FBI) ದತ್ತಾಂಶಗಳಿಂದ ತಿಳಿದು ಬಂದಿದೆ ಎಂದು The Times of India ವರದಿ ಮಾಡಿದೆ.

                 ಭಾರತದಲ್ಲಿ ಕಾನೂನು ಬಾಹಿರವಾಗಿ ಕಾಲ್ ಸೆಂಟರ್ ಗಳನ್ನು ನಡೆಸುತ್ತಿರುವ ವಂಚಕರು, ಅಮೆರಿಕಾ ನಿವಾಸಿಗಳನ್ನು ಮುಖ್ಯವಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಅಂಥವರಿಗೆ ತಾಂತ್ರಿಕ ಸಹಾಯ ಅಥವಾ ಇತರ ನೆರವು ನೀಡುವುದಾಗಿ ಹೇಳಿಕೊಂಡು ಕಾರ್ಯಾಚರಿಸುತ್ತಿದ್ದಾರೆ ಎಂದು ವರದಿಯಾಗಿದೆ.

                 ಕೇವಲ ಕಳೆದ ಹನ್ನೊಂದು ತಿಂಗಳಲ್ಲಿ ಅಮೆರಿಕಾ ಪ್ರಜೆಗಳು ಅಂತರ್ಜಾಲ ಅಥವಾ ಕಾಲ್ ಸೆಂಟರ್ ಸಂಬಂಧಿತ ವಂಚನೆಗಳಿಂದ 10.2 ಶತಕೋಟಿ ಡಾಲರ್ ಕಳೆದುಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಮೊತ್ತದಲ್ಲಿ ಶೇ. 47ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ ಒಟ್ಟು 6.9 ಶತಕೋಟಿ ಡಾಲರ್ ಮೊತ್ತದ ವಂಚನೆ ಎಸಗಲಾಗಿತ್ತು ಎಂದೂ ವರದಿಯಲ್ಲಿ ತಿಳಿಸಲಾಗಿದೆ.

                  ಕಳೆದ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಕಾನೂನುಬಾಹಿರವಾಗಿ ಕರೆ ಕೇಂದ್ರಗಳನ್ನು ನಡೆಸುತ್ತಿದ್ದ ಮೂರು ಮಂದಿಯನ್ನು ಬಂಧಿಸಿದ್ದ ದಿಲ್ಲಿ ಪೊಲೀಸರು, ಆರೋಪಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಂಪ್ಯೂಟರ್‌ಗಳನ್ನು ರಿಪೇರಿ ಮಾಡಲು ತಾಂತ್ರಿಕ ನೆರವು ಒದಗಿಸುವ ಭರವಸೆ ನೀಡಿ ಅಮೆರಿಕಾದ ಹಿರಿಯ ನಾಗರಿಕರಿಗೆ ವಂಚಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದರು.

                  ರಾತ್ರೋರಾತ್ರಿ ದಿಲ್ಲಿ ಪೊಲೀಸರು ನಡೆಸಿದ್ದ ದಾಳಿಯಲ್ಲಿ ಮೂವರು ಆರೋಪಿಗಳು ಸೆರೆ ಸಿಕ್ಕ ಬೆನ್ನಿಗೇ ಅವರ ಓರ್ವ ಸಹಚರ ಟೊರೊಂಟೊದಲ್ಲಿ ಕೆನಡಾ ಕಾನೂನು ಜಾರಿ ದಳಕ್ಕೆ ಸಿಕ್ಕಿ ಬಿದ್ದಿದ್ದ. ಮತ್ತೋರ್ವ ಸಹಚರ ನ್ಯೂ ಜೆರ್ಸಿಯಲ್ಲಿ FBI ಪೊಲೀಸರ ಬಲೆಗೆ ಬಿದ್ದಿದ್ದ.

                 ಅಮೆರಿಕಾ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 20,000ಕ್ಕೂ ಹೆಚ್ಚು ಮಂದಿ ಈ ಹಗರಣದ ಬಲಿಪಶುಗಳಾಗಿದ್ದು, ಇದರಿಂದ 2012-2020ರ ಅವಧಿಯಲ್ಲಿ ಅಮೆರಿಕಾ 10 ದಶಲಕ್ಷ ಡಾಲರ್ ಆದಾಯ ನಷ್ಟ ಅನುಭವಿಸಿದೆ ಎಂದು ದಿಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

              ಭಾರತ ಮೂಲದಿಂದ ನಡೆಯುತ್ತಿರುವ ವಂಚನೆ ಪ್ರಕರಣಗಳಲ್ಲಿನ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ FBI, ಹೊಸದಿಲ್ಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಗೆ ತನ್ನ ಖಾಯಂ ಪ್ರತಿನಿಧಿಯನ್ನು ನಿಯೋಜಿಸಿದೆ. ಈ ನಡೆಯ ಮೂಲಕ ಸಿಬಿಐ, ಇಂಟರ್‌ಪೋಲ್ ಹಾಗೂ ದಿಲ್ಲಿ ಪೊಲೀಸರೊಂದಿಗೆ ಕಾರ್ಯಾಚರಿಸಿ ಇಂತಹ ಅಪರಾಧಗಳನ್ನು ಮಟ್ಟ ಹಾಕುವ ಗುರಿಯನ್ನು FBI ಹೊಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries