10ರಂದು ಪದ್ಮಗಿರಿ ಕಲಾಕುಟೀರದಲ್ಲಿ 'ರಾಗ ನೈವೇದ್ಯ'ಭಕ್ತಿ-ಭಾವಗೀತೆಗಳ ಕಾರ್ಯಕ್ರಮ
0
ಡಿಸೆಂಬರ್ 06, 2022
ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ವತಿಯಿಂದ ಹಿಂದೂಸ್ಥಾನಿ ಗಾಯಕಿ ಸ್ವರಸರಸ್ವತಿ ಸುಜಾತಾ ಗುರವ್ ಹಾಗೂ ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕಿ ಕರ್ನಾಟಕ ಭೂಷಣ ಸೀಮಾ ರಾಯ್ಕರ್ ಅವರಿಂದ 'ರಾಗ ನೈವೇದ್ಯ'ಭಕ್ತಿ-ಭಾವಗೀತೆಗಳ ಕಾರ್ಯಕ್ರಮ ಡಿ. 10ರಂದು ಸಂಜೆ 5ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಐ.ಭಟ್ ಸಮಾರಂಭ ಉದ್ಘಾಟಿಸುವರು. ನಗರಸಭಾ ಸದಸ್ಯೆ ಹೇಮಲತಾ ಶೆಟ್ಟಿ ಅದ್ಯಕ್ಷತೆ ವಹಿಸುವರು.ನಗರಸಭಾ ಸದಸ್ಯೆಯರಾದ ವೀಣಾ ಅರುಣಶೆಟ್ಟಿ, ಶ್ರೀಲತಾ ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.