ಕೊಚ್ಚಿ: ಜ್ಯೂಸ್ ಕುಡಿದು ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣವನ್ನು 11 ವರ್ಷಗಳ ನಂತರ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದೆ.
ಪುಲೂರಿನಲ್ಲಿ ಬೇಕರಿಯೊಂದರಲ್ಲಿ ಜ್ಯೂಸ್ ಕುಡಿದು 10ನೇ ತರಗತಿ ವಿದ್ಯಾರ್ಥಿ ರಾಣಾ ಪ್ರತಾಪ್ ಸಿಂಗ್ ಸಾವನ್ನಪ್ಪಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ರಾಣಾ ಪ್ರತಾಪ್ ಸಿಂಗ್ 2011 ರಲ್ಲಿ ಮೃತಪಟ್ಟಿದ್ದನು. ಸಿಬಿಐ ತನಿಖೆಯ ಮೂಲಕ ಸತ್ಯಾಂಶ ಹೊರತರಬೇಕು ಎಂದು ಕೋರ್ಟ್ ಹೇಳಿದೆ. ಪ್ರಕರಣದ ದಾಖಲೆಗಳನ್ನು ಸಿಬಿಐಗೆ ಒಪ್ಪಿಸುವಂತೆಯೂ ಪೆÇಲೀಸರಿಗೆ ಸೂಚಿಸಲಾಗಿದೆ.
ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ರಾಣಾ ಪ್ರತಾಪ್ ಸಿಂಗ್ ತನ್ನ ಸ್ನೇಹಿತರೊಂದಿಗೆ ಬೇಕರಿಯಲ್ಲಿ ಜ್ಯೂಸ್ ಸೇವಿಸಿದ್ದ. ಸೇವಿಸಿ ಒಂದು ಗಂಟೆಯ ನಂತರ ಮೃತಪಟ್ಟಿದ್ದ. ಸ್ನೇಹಿತರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿರಲಿಲ್ಲ. ತಂದೆ ಸುಧೀಂದ್ರ ಪ್ರಸಾದ್ ಸಿಬಿಐ ತನಿಖೆಗೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಎಡಿಜಿಪಿ ಬಿ ಸಂಧ್ಯಾ ನೇತೃತ್ವದಲ್ಲಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. 2017 ರಲ್ಲಿ. ಇದೊಂದು ನರಹತ್ಯೆ ಎಂದು ವೈಜ್ಞಾನಿಕ ವರದಿ ಬಂದಿದ್ದರೂ ಹೆಚ್ಚಿನ ಪುರಾವೆಗಳು ಸಿಕ್ಕಿಲ್ಲ. ಅರ್ಜಿ ವಿಚಾರಣೆ ನಡೆಯುತ್ತಿರುವಾಗಲೇ ತಂದೆ ಸುಧೀಂದ್ರ ಪ್ರಸಾದ್ ಮೃತಪಟ್ಟಿದ್ದಾರೆ. ಈಗ ಅವರ ಮತ್ತೊಬ್ಬ ಮಗನನ್ನು ಕಕ್ಷಿದಾರನನ್ನಾಗಿಸಿ ಸಿಬಿಐ ತನಿಖೆಗೆ ಕೋರ್ಟ್ ಆದೇಶಿಸಿತು.
ಜ್ಯೂಸ್ ಕುಡಿದು ವಿದ್ಯಾರ್ಥಿ ಸಾವು; 11 ವರ್ಷಗಳ ಬಳಿಕ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
0
ಡಿಸೆಂಬರ್ 24, 2022