ಕಾಬೂಲ್: ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತ್ಯದ ಸುರಂಗದೊಳಗೆ ತೈಲ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 12ಕ್ಕೂ ಹೆಚ್ಚು ಮಂದಿ ಸಜೀವದಹನವಾಗಿರುವ ದಾರುಣ ಘಟನೆ ನಡೆದಿದೆ.
ಸಲಾಂಗ್ ಸುರಂಗದೊಳಗೆ ಭೀಕರ ಸ್ಫೋಟ ಸಂಭವಿಸಿತ್ತು. ನಂತರ ಬೆಂಕಿ ಹೊತ್ತಿಕೊಂಡು 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಇನ್ನು ಹಲವು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪ್ರಾಂತೀಯ ಆಡಳಿತದ ವಕ್ತಾರ ಹಿಕ್ಮತುಲ್ಲಾ ಶಮೀಮ್ ಕ್ಸಿನ್ಹುವಾಗೆ ತಿಳಿಸಿದರು.
ಈ ಘಟನೆಯಿಂದಾಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಉತ್ತರದ ಎಂಟು ಪ್ರಾಂತ್ಯಗಳೊಂದಿಗೆ ಸಂಪರ್ಕಿಸುವ 3,000 ಮೀಟರ್ ಎತ್ತರದ ಸಲಾಂಗ್ ಸುರಂಗವು ಸಂಚಾರಕ್ಕೆ ಅಡ್ಡಿಯಾಗಿತ್ತು ಎಂದು ಸ್ಥಳೀಯರರು.
ಸದ್ಯ ಬೆಂಕಿ ನಂದಿಸಲಾಗಿದ್ದು ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಶಮೀಮ್ ಹೇಳಿದರು.