ಕಣ್ಣೂರು: ಕೊಚ್ಚಿ ಮುನಾಂಬzಲ್ಲಿÀ ಮೀನುಗಾರಿಕಾ ದೋಣಿ ಮುಳುಗಿದೆ. 20 ದಿನಗಳ ಹಿಂದೆ ತೆರಳಿದ್ದ ಬೋಟ್ ಸಮುದ್ರದ ಮಧ್ಯದಲ್ಲಿ ಮುಳುಗಿರುವುದಾಗಿ ತಿಳಿದುಬಂದಿದೆ.
ಕಣ್ಣೂರಿನಿಂದ 67 ನಾಟಿಕಲ್ ಮೈಲು ದೂರದಲ್ಲಿ ಅಪಘಾತ ಸಂಭವಿಸಿದೆ. ದೋಣಿಯಲ್ಲಿದ್ದ 13 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಶೈಜಾ ಎಂಬ ಹೆಸರಿನ ಬೋಟ್ ಅಪಘಾತಕ್ಕೀಡಾಗಿದೆ. ತಮಿಳುನಾಡಿನ ಎಂಟು ಮಂದಿ ಹಾಗೂ ಅಸ್ಸಾಂ ಮೂಲದ ಐವರು ದೋಣಿಯಲ್ಲಿದ್ದರು. ಪ್ರಯಾಣದ ಆರಂಭದಲ್ಲಿ ದೋಣಿಯ ಇಂಜಿನ್ ಕೆಟ್ಟು ಹೋಗಿತ್ತು. ನಂತರ ಕಣ್ಣೂರು ಅನ್ ಲೋಡಿಂಗ್ ಬಂದರಿನಲ್ಲಿ ಸಮಸ್ಯೆ ಬಗೆಹರಿಯಿತು. ಇದಾದ ಬಳಿಕ ಪ್ರಯಾಣ ಮುಂದುವರಿಸುತ್ತಿದ್ದಾಗ ಬೋಟ್ ಅಪಘಾತಕ್ಕೀಡಾಗಿದೆ.
ಬೋಟ್‍ನ ಕೆಳಭಾಗದ ರಂಧ್ರದಿಂದ ನೀರು ನುಗ್ಗಿದ್ದೇ ಅವಘಡಕ್ಕೆ ಕಾರಣ ಎಂದು ದೋಣಿಯಲ್ಲಿದ್ದವರು ಹೇಳಿದ್ದಾರೆ. ದೋಣಿ ಒಂದು ಬದಿಗೆ ತಿರುಗಿದಾಗ ಕಾರ್ಮಿಕರಿಗೆ ತೊಂದರೆ ತಿಳಿದುಬಂತು. ಈ ಬಗ್ಗೆ ಹಮ್ರೇಡಿಯೋ ಆಪರೇಟರ್ ರೋನಿ ಪೋಲೀಸರಿಗೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.
ಮದರ್ ಇಂಡಿಯಾ ಎಂಬ ಬೋಟ್ ಸಹಾಯದಿಂದ ಅಜಿಕಲ್ ಪೆÇಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೂರು ಗಂಟೆಯೊಳಗೆ ಮದರ್ ಇಂಡಿಯಾ ಬೋಟ್ ತಲುಪಿ ಸಮುದ್ರದಲ್ಲಿ ಮುಳುಗಿದ್ದ ಮೀನುಗಾರರನ್ನು ರಕ್ಷಿಸಿತು.
ಕಣ್ಣೂರಿನಲ್ಲಿ ಮೀನುಗಾರಿಕಾ ದೋಣಿ ಮುಳುಗಡೆ; 13 ಮೀನುಗಾರರ ರಕ್ಷಣೆ
0
ಡಿಸೆಂಬರ್ 04, 2022
Tags