ಕೊಲ್ಲಂ: ಎಸ್‍ಎನ್ ಕಾಲೇಜಿನಲ್ಲಿ ಎಸ್‍ಎಫ್‍ಐ-ಎಐಎಸ್‍ಎಫ್ ಸಂಘರ್ಷ ತೀವ್ರ ಸ್ವರೂಪ ಪಡೆದಿದೆ. 14 ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮೂವರು ವಿದ್ಯಾರ್ಥಿಗಳನ್ನು ಪಾರಿಪಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲೇಜು ಯೂನಿಯನ್ ಚುನಾವಣೆಯಲ್ಲಿ ಸೋತ ದ್ವೇಷದಲ್ಲಿ ಎಸ್‍ಎಫ್‍ಐ ಕಾರ್ಯಕರ್ತರು ಥಳಿಸಿರುವರೆಂದು ಎಐಎಸ್‍ಎಫ್ ನಾಯಕತ್ವ ಆರೋಪಿಸಿದೆ.
ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾಲೇಜು ಆವರಣದಲ್ಲಿ ಕುಳಿತಿದ್ದ ಎಐಎಸ್‍ಎಫ್ ಕಾರ್ಯಕರ್ತರ ಮೇಲೆ ಎಸ್‍ಎಫ್‍ಐ ಕಾರ್ಯಕರ್ತರ ಗುಂಪೆÇಂದು ಏಕಾಏಕಿ ದೊಣ್ಣೆ ಹಾಗೂ ಇತರ ವಸ್ತುಗಳಿಂದ ಥಳಿಸಿದ್ದು, ಈ ವೇಳೆ ಭಾರಿ ವಾಗ್ವಾದ ನಡೆದಿದೆ.
ಕಾಲೇಜಿನ ವಿದ್ಯಾರ್ಥಿಗಳಲ್ಲದೆ, ಜಿಲ್ಲಾ ಸಮಿತಿ ಸದಸ್ಯರಾದ ಎಸ್‍ಎಫ್‍ಐ ಮುಖಂಡರಿಗೂ ಎಐಎಸ್‍ಎಫ್ ಕಾರ್ಯಕರ್ತರು ಥಳಿಸಿದ್ದಾರೆ. ಅವರ ಬಳಿ ಮಾರಕ ಆಯುಧಗಳಿದ್ದವು ಎಂದು ಆರೋಪಿಸಿದ್ದಾರೆ.
ಕಾಲೇಜಿನಲ್ಲಿ ಯೂನಿಯನ್ ಚುನಾವಣೆ ನಡೆಯಿತು. ಏಕಾಂಗಿಯಾಗಿ ಸ್ಪರ್ಧಿಸಿದ್ದ ಎಐಎಸ್‍ಎಫ್ 15 ಸ್ಥಾನಗಳನ್ನು ವಶಪಡಿಸಿಕೊಂಡಿದೆ. ಈ ದ್ವೇಷದಿಂದ ಎಸ್‍ಎಫ್‍ಐಗಳು ತಮ್ಮನ್ನು ಅಮಾನುಷವಾಗಿ ಥಳಿಸಿದ್ದಾರೆ ಎಂದು ಗಾಯಗೊಂಡ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಸೋಲು; ಕೊಲ್ಲಂ ಎಸ್‍ಎನ್ ಕಾಲೇಜಿನಲ್ಲಿ ಎಸ್‍ಎಫ್‍ಐ-ಎಐಎಸ್‍ಎಫ್ ಘರ್ಷಣೆ, 14 ವಿದ್ಯಾರ್ಥಿಗಳಿಗೆ ಗಾಯ, ಮೂವರ ಸ್ಥಿತಿ ಚಿಂತಾಜನಕ
0
ಡಿಸೆಂಬರ್ 07, 2022