ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯವಾಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ 149 ರಿಂದ 171 ಸ್ಥಾನ ಪಡೆಯುವ ಮೂಲಕ ಮೊದಲ ಬಾರಿಗೆ ಅಧಿಕಾರಕ್ಕೆ ಬರಲಿದ್ದು, ಆಡಳಿತರೂಢ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳಿದೆ.
ಇಂಡಿಯಾ ಟುಡೆ ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 149 ರಿಂದ 171
ಬಿಜೆಪಿ: 69 ರಿಂದ 91
ಕಾಂಗ್ರೆಸ್: 3 ರಿಂದ 7
ಇತರರ: 5 ರಿಂದ 9
ಟೈಮ್ಸ್ ನೌ ಎಕ್ಸಿಟ್ ಪೋಲ್
ಎಎಪಿ – 146 ರಿಂದ 156 ಸ್ಥಾನ
ಬಿಜೆಪಿ – 84 ರಿಂದ 94 ಸ್ಥಾನ
ಕಾಂಗ್ರೆಸ್ – 6 ರಿಂದ 10 ಸ್ಥಾನ
ನ್ಯೂಸ್ ಎಕ್ಸ್– ಜನ್ ಕೀ ಬಾತ್
ಎಎಪಿ -159 ರಿಂದ 175 ಸ್ಥಾನಗಳು
ಬಿಜೆಪಿ - 70 ರಿಂದ 92 ಸ್ಥಾನಗಳು
ಕಾಂಗ್ರೆಸ್ -04 ರಿಂದ 7 ಸ್ಥಾನಗಳು
ಕಳೆದ ಡಿಸೆಂಬರ್ 4 ರಂದು ದೆಹಲಿ ಪಾಲಿಕೆಯ 250 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಡಿಸೆಂಬರ್ 7 ರಂದು ಫಲಿತಾಂಶ ಪ್ರಕಟವಾಗಲಿದೆ.