HEALTH TIPS

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 150ನೇ ಸ್ಥಾನಕ್ಕೆ ಕುಸಿದ ಭಾರತ: RSF ವರದಿ

                  ವದೆಹಲಿ:ತಮ್ಮ ಕರ್ತವ್ಯಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಸರಾಸರಿ ಮೂರರಿಂದ ನಾಲ್ವರು ಪತ್ರಕರ್ತರು ಹತ್ಯೆಗೀಡಾಗುತ್ತಿದ್ದು, ಇಡೀ ವಿಶ್ವದಲ್ಲಿ ಪತ್ರಕರ್ತರ ಪಾಲಿಗೆ ಭಾರತವು ಅತ್ಯಂತ ಅಪಾಯಕಾರಿ ದೇಶಗಳ ಪೈಕಿ ಒಂದಾಗಿದೆ' ಎಂದು Reporters Without Borders (RSF) ಪ್ರಕಟಿಸಿರುವ 2022ನೇ ಸಾಲಿನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ವರದಿಯಲ್ಲಿ ಹೇಳಲಾಗಿದೆ.

                      ಇದರಿಂದ ಕಳೆದ ಬಾರಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 142ನೇ ಸ್ಥಾನದಲ್ಲಿದ್ದ ಭಾರತವು ಈ ಬಾರಿ 150ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ 150-180ರೊಳಗಿನ ಶ್ರೇಯಾಂಕ ಪಡೆದು ಕಳಪೆ ಸಾಧನೆ ಮಾಡಿರುವ ದೇಶಗಳ ಪೈಕಿ ಭಾರತವೂ ಸೇರಿದೆ ಎಂದು thenewsminute.com ವರದಿ ಮಾಡಿದೆ.

                  "2014ರಲ್ಲಿ BJP ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಪತ್ರಕರ್ತರ ಮೇಲಿನ ದೌರ್ಜನ್ಯ, ಪಕ್ಷಪಾತಿ ಮಾಧ್ಯಮಗಳು ಮತ್ತು ಮಾಧ್ಯಮ ಮಾಲೀಕತ್ವದ ಸಾಂದ್ರೀಕರಣ ಎಲ್ಲವೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥಯಾದ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಿಕ್ಕಟ್ಟಿಗೆ ಕಾರಣವಾಗಿವೆ. 2022ರ ನಂತರ ಓರ್ವ ಪತ್ರಕರ್ತನ ಹತ್ಯೆಯಾಗಿದ್ದು, ಮೂವರು ಪತ್ರಕರ್ತರು ಸೆರೆವಾಸದಲ್ಲಿದ್ದಾರೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

                    ವರದಿಯ ಪ್ರಕಾರ, 2014ರಲ್ಲಿ ನರೇಂದ್ರ ಮೋದಿ (Narendra Modi) ಅಧಿಕಾರಕ್ಕೆ ಬಂದ ನಂತರ ಪತ್ರಿಕಾ ಸ್ವಾತಂತ್ರ್ಯವು ಆಮೂಲಾಗ್ರವಾಗಿ ಬದಲಾಗಿದ್ದು, ಮೋದಿಯವರು ತಮ್ಮ ಪಕ್ಷವಾದ ಬಿಜೆಪಿ ಹಾಗೂ ಮಾಧ್ಯಮಗಳ ಒಡೆತನ ಹೊಂದಿರುವ ಶ್ರೀಮಂತ ಕುಟುಂಬಗಳ ನಡುವೆ ಅದ್ಭುತವಾದ ಸೌಹಾರ್ದತೆಯನ್ನು ಹುಟ್ಟು ಹಾಕಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ದೇಶಾದ್ಯಂತ 70 ಮಾಧ್ಯಮ ಸಂಸ್ಥೆಗಳು ಹಾಗೂ 800 ದಶಲಕ್ಷ ವೀಕ್ಷಕರನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲಕ ಮುಕೇಶ್ ಅಂಬಾನಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಮಿತ್ರರಾಗಿರುವುದು ಎಂಬ ಸಂಗತಿಯತ್ತ ಬೊಟ್ಟು ಮಾಡಿದೆ ಎಂದು thenewsminute.com ವರದಿ ಮಾಡಿದೆ.

                 ಇದಕ್ಕೂ ಮುನ್ನ ಪತ್ರಕರ್ತರ ಬಗ್ಗೆ ನೇರಾನೇರ ವಿಮರ್ಶಾತ್ಮಕ ನಿಲುವು ತಳೆದಿದ್ದ ನರೇಂದ್ರ ಮೋದಿ, ಅವರು ನನ್ನ ಹಾಗೂ ನನ್ನ ಬೆಂಬಗಲಿರ ನಡುವಿನ ಬಾಂಧ್ಯವವನ್ನು ಕಲುಷಿತಗೊಳಿಸುವ ಮಧ್ಯವರ್ತಿಗಳಾಗಿದ್ದಾರೆ ಎಂದು ಪತ್ರಕರ್ತರನ್ನು ಟೀಕಿಸಿದ್ದರು. ನಂತರ ನರೇಂದ್ರ ಮೋದಿ ಸರ್ಕಾರದ ಬಗ್ಗೆ ತೀರಾ ವಿಮರ್ಶಾತ್ಮಕವಾಗಿದ್ದ ಭಾರತೀಯ ಪತ್ರಕರ್ತರನ್ನು ತೀವ್ರ ಕಿರುಕುಳಕ್ಕೆ ಒಳಪಡಿಸಲಾಯಿತು ಮತ್ತು ಭಕ್ತರೆಂದು ಕರೆಸಿಕೊಳ್ಳುವ ಮೋದಿ ಅಭಿಮಾನಿಗಳಿಂದ ಅವರ ವಿರುದ್ಧ ದಾಳಿಯ ಅಭಿಯಾನವನ್ನು ನಡೆಸಲಾಯಿತು ಎಂದೂ ವರದಿಯಲ್ಲಿ ಹೇಳಲಾಗಿದೆ.

                 ಭಾರತದ ಕಾನೂನು ರಕ್ಷಣೆಯ ಸಿದ್ಧಾಂತ ಹೊಂದಿದ್ದರೂ ಸರ್ಕಾರದ ಬಗ್ಗೆ ವಿಮರ್ಶಾತ್ಮಕವಾಗಿರುವ ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆ, ದೇಶದ್ರೋಹ ಆರೋಪ, ನ್ಯಾಯಾಂಗ ನಿಂದನೆ ಮೊಕದ್ದಮೆ ಹಾಗೂ ರಾಷ್ಟ್ರೀಯ ಭದ್ರತೆಗೆ ಆರೋಪದಡಿಯಲ್ಲಿ ದೊಡ್ಡ ಮಟ್ಟದ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಅಂತಹ ಪತ್ರಕರ್ತರಿಗೆ ದೇಶದ್ರೋಹಿ ಹಣೆಪಟ್ಟಿ ಹಚ್ಚಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದರೊಂದಿಗೆ ಪೊಲೀಸರ ಹಿಂಸೆ, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಕ್ರಿಮಿನಲ್‌ಗಳು ಹಾಗೂ ರಾಜಕಾರಣಿಗಳ ಆಕ್ರಮಣ ಹಾಗೂ ಸಾಮಾಜಿಕ ಮಾಧ್ಯಮಗಳ ಟ್ರಾಲ್‌ನಿಂದ ಭಾರತೀಯ ಪತ್ರಕರ್ತರು ಎದುರಿಸುತ್ತಿರುವ ಬೆದರಿಕೆಗಳ ಕುರಿತೂ ಬೆಳಕು ಚೆಲ್ಲಿದೆ.

                 Reporters Without Borders ಪ್ರಕಟಿಸಿರುವ 2022ನೇ ಸಾಲಿನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಅಗ್ರ ಸ್ಥಾನ ಗಳಿಸಿದ್ದರೆ, ಡೆನ್ಮಾರ್ಕ್ ಎರಡನೆ ಸ್ಥಾನದಲ್ಲಿದೆ. ಕಳಪೆ ಸಾಧನೆ ಮಾಡಿರುವ ದೇಶಗಳ ಪೈಕಿ ರಷ್ಯಾ ಭಾರತಕ್ಕಿಂತ ಕೆಳಗಿದ್ದು, 155ನೇ ಸ್ಥಾನ ಪಡೆದಿದೆ. ಉಳಿದಂತೆ ಈಜಿಪ್ಟ್ 168ನೇ ಸ್ಥಾನ, ಚೀನಾ 175ನೇ ಸ್ಥಾನ, ಇರಾನ್ 178ನೇ ಸ್ಥಾನ ಹಾಗೂ ಉತ್ತರ ಕೊರಿಯಾ 180ನೇ ಸ್ಥಾನ ಪಡೆಯುವ ಮೂಲಕ ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶಗಳಾಗಿ ಹೊರಹೊಮ್ಮಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries