ನವದೆಹಲಿ: ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚಳಗೊಂಡಿದ್ದು, ಈ ನಡುವಲ್ಲೇ ನ್ಯೂಯಾರ್ಕ್ ನಲ್ಲಿ ಆತಂಕ ಸೃಷ್ಟಿಸಿರುವ ಕೋವಿಡ್ ರೂಪಾಂತರಿ ವೈರಸ್'ನ ಎಕ್ಸ್ಎಕ್ಸ್ಬಿ.1.5 ಭಾರತದಲ್ಲಿ ಪತ್ತೆಯಾಗಿದ್ದು, ಈ ಬೆಳವಣಿಗೆ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.
ಕೋವಿಡ್'ನ ಹೊಸ ರೂಪಾಂತರಿ ವೈರಸ್ ಗುಜರಾತ್ ರಾಜ್ಯದಲ್ಲಿ ಪತ್ತೆಯಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ,
ಅಮೆರಿಕಾದಲ್ಲಿ ಪ್ರಸ್ತುತ ವರದಿಯಾಗುತ್ತಿರುವ ಶೇಕಡಾ 40ಕ್ಕಿಂತಲೂ ಹೆಚ್ಚು ಕೋವಿಡ್ ಪ್ರಕರಣಗಳಿಗೆ ಓಮಿಕ್ರಾನ್ ಎಕ್ಸ್ಎಕ್ಸ್ಬಿ.1.5 ರೂಪಾಂತರಿ ವೈರಸ್ ಕಾರಣ ಎಂದು ಹೇಳಲಾಗುತ್ತಿದೆ.
ಎಕ್ಸ್ಎಕ್ಸ್ಬಿ.1.5 ರೂಪಾಂತರಿ ವೈರಸ್ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಸೋಂಕು ಉಂಟುಮಾಡಬಲ್ಲಂಥದ್ದಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ತಿಳಿಸಿದ್ದಾರೆ. ಈ ರೂಪಾಂತರಿಯು ಬಿಕ್ಯೂ ಮತ್ತು ಎಕ್ಸ್'ಬಿಬಿಗಿಂತಲೂ ಹೆಚ್ಚು ಸೋಂಕುಕಾರಕ ಎಂದು ಅವರು ಹೇಳಿದ್ದಾರೆ.