ನಮ್ಮ ಮನಸ್ಸು ಮತ್ತು ದೇಹವು ಶಕ್ತಿ ಹೀನವಾಗಿ ಬರಿದಾಗಿದೆ ಎಂದು ನಿಮಗೆ ಕೆಲವೊಮ್ಮೆ ಅನಿಸುತ್ತದೆಯೇ? ಆಹಾರದ ಕೊರತೆ, ವಿಶ್ರಾಂತಿ ಕೊರತೆ, ಉದ್ವೇಗ ಮತ್ತು ಒತ್ತಡ ಇವೆಲ್ಲವೂ ಕಡಿಮೆ ಶಕ್ತಿಗೆ ಕಾರಣವಾಗುತ್ತವೆ.
ಇದನ್ನೊಮ್ಮೆ ಪ್ರಯತ್ನಿಸಿ:
ಧ್ಯಾನದ ಭಾಗವಾಗಿ ಅಲುಗಾಡುವುದು ಒಂದಷ್ಟು ಚೇತೋಹಾರಿಯೆನ್ನುವುದು ಒಂದು ಪರಿಹಾರೋಪಾಯ ಎಂಬುದು ಗತ್ತೇ?. ಹೆಚ್ಚು ಶ್ರಮವಿಲ್ಲದೆ 15 ನಿಮಿಷಗಳ ಕಾಲ, ದೇಹ ಮತ್ತು ಮನಸ್ಸಿನ ಉತ್ಸಾಹದ ಕೊರತೆಯನ್ನು ನಾವು ಸ್ವಲ್ಪವಾದರೂ ಕಡಿಮೆ ಮಾಡಬಹುದು. ಅಚ್ಚರಿಯಾದರೂ ಇದು ನಿಜ. ಆದರೆ ದೇಹವನ್ನು ಅಲುಗಾಡಿಸುವ ತಂತ್ರವಿದೆ. ಮನುಷ್ಯರು ಈ ಮಾದರಿಯನ್ನು ಅನುಸರಿಸದಿದ್ದರೂ, ಬೆಕ್ಕುಗಳು ಮತ್ತು ನಾಯಿಗಳು ತಮ್ಮ ದೇಹವನ್ನು ಈ ರೀತಿ ಅಲುಗಾಡಿಸುವುದರ ಮೂಲಕ ಮೂಲಕ ಪ್ರಪುಲ್ಲಗೊಳ್ಳುವ ಕ್ರಮ ಗಮನಿಸಿದ್ದೀರಾ?!
ಮಾಡುವ ವಿಧಾನ:
ಎದ್ದುನಿಂತು ನಿಮ್ಮ ಕಾಲುಗಳನ್ನು ಸ್ವಲ್ಪ ದೂರದಲ್ಲಿ ಹರಡಿ. ನಿಮ್ಮ ಮೊಣಕಾಲುಗಳು ಮತ್ತು ಕೈಗಳನ್ನು ವಿಶ್ರಾಂತಿ ಸ್ಥಿತಿಯಲ್ಲಿಡಿ. ಮೊಣಕಾಲುಗಳಿಂದ ದೇಹವನ್ನು ಮೇಲೆ-ಕೆಳಗೆ ಚಿಮ್ಮಿಸಲು ಪ್ರಾರಂಭಿಸಿ. ಇದು ಇಡೀ ದೇಹವನ್ನು ನಿಧಾನವಾಗಿ ವ್ಯಾಪಿಸಬೇಕು. ನೀವು ಇಡೀ ದೇಹವನ್ನು ಮೊಣಕಾಲುಗಳಿಂದ ಪ್ರಾರಂಭಿಸಿ ಭುಜಗಳು ಮತ್ತು ತೋಳುಗಳ ಮೂಲಕ ಹಾದುಹೋಗಬಹುದು. ಇದನ್ನು 15 ನಿಮಿಷಗಳ ಕಾಲ ಮಾಡಿ. ನಿಮ್ಮ ದೇಹದಲ್ಲಿ ಶಕ್ತಿಯ ಉಲ್ಬಣವನ್ನು ನೀವು ಅನುಭವಿಸುವಿರಿ. ಮತ್ತು ಆಯಾಸ ನಿವಾರಣೆಯಾಗುವುದು ವೇದ್ಯವಾಗತೊಡಗುತ್ತದೆ. ದೇಹ ಮತ್ತು ಮನಸ್ಸು ಎರಡೂ ವಿಶ್ರಾಂತಿ ಪಡೆಯುತ್ತವೆ. ಇದನ್ನು ಹಾಡು ಅಥವಾ ಇತರ ಪಕ್ಕವಾದ್ಯದೊಂದಿಗೆ ಮಾಡುವುದು ಸಹ ಪ್ರಯೋಜನಕಾರಿಯಾಗಿದೆ. ಮೆದುಳಿನ ಆರೋಗ್ಯಕ್ಕೆ ಈ ಸಲಹೆ ತುಂಬಾ ಒಳ್ಳೆಯದು. ಇಡೀ ದಿನ ರಿಫ್ರೆಶ್ ಆಗಿರಲು ಬೆಳಿಗ್ಗೆ ಇದನ್ನು ಮಾಡುವುದು ಸೂಕ್ತ. ಯೋಗದಂತೆಯೇ ಏಕಾಗ್ರತೆಯಿಂದ ಮಾಡಬೇಕು.
ಇದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಉತ್ತೇಜಿಸುತ್ತದೆ. ಇದು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ದುಗ್ಧರಸ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುದರಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಜೊತೆಗೆ, ಇದಕ್ಕೂ ಮೊದಲು ಕುಟುಂಬ ವೈದ್ಯರ ಸಲಹೆಯನ್ನು ಕೇಳಿ ಈ ಚಟುವಟಿಕೆ ಅನುಸರಿಸುವುದು ಉತ್ತಮ.
ದೇಹ-ಮನಸ್ಸು ಚೈತನ್ಯಗೊಳ್ಳಲು ಪ್ರಾಣಿಗಳಂತೆ ನಾವೂ ಏಕೆ ಪ್ರಯತ್ನಿಸಬಾರದು?: 15 ನಿಮಿಷಗಳ ಈ ಒಂದು ಪ್ರಕ್ರಿಯೆ ಪ್ರಯೋಗಿಸಿ ನೋಡಿ
0
ಡಿಸೆಂಬರ್ 08, 2022