ಕೊಟ್ಟಾಯಂ: ಶಬರಿಮಲೆ ಯಾತ್ರಾರ್ಥಿಗಳು ಸಾಗುತ್ತಿದ್ದ ವಾಹನವೊಂದು ಎರುಮೇಲಿ ಕನ್ನಿಮಳದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ವಾಹನದಲ್ಲಿದ್ದ 17 ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 10 ವರ್ಷದ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಮುಂಡಕಯಂ ಎರುಮೇಲಿ ರಾಜ್ಯ ಹೆದ್ದಾರಿಯಲ್ಲಿ ಮಧ್ಯಾಹ್ನ 3.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಚೆನ್ನೈನಿಂದ ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿಗೆ ಈ ಅವಘಡ ಸಂಭವಿಸಿದೆ.
ಎರುಮೇಲಿ ಬಳಿ ಕನ್ನಿಮಲೆ ಇಳಿಜಾರಿನಲ್ಲಿ ವಾಹನ ನಿಯಂತ್ರಣ ತಪ್ಪಿ ಕ್ರ್ಯಾಶ್ ಬ್ಯಾರಿಯರ್ ಮುರಿದು ಹಳ್ಳಕ್ಕೆ ಬಿದ್ದಿದೆ. ವಾಹನದಲ್ಲಿ ಒಟ್ಟು 21 ಮಂದಿ ಇದ್ದರು. ಗಾಯಾಳುಗಳನ್ನು ಕಾಂಜಿರಪಳ್ಳಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರುಮೇಲಿಯಲ್ಲಿ ಶಬರಿಮಲೆ ಯಾತ್ರಿಕರ ವಾಹನ ಪಲ್ಟಿ; 17 ಮಂದಿ ಗಾಯ: 10 ವರ್ಷದ ಬಾಲಕನ ಸ್ಥಿತಿ ಚಿಂತಾಜನಕ
0
ಡಿಸೆಂಬರ್ 16, 2022