HEALTH TIPS

ಡಿ.17ರಿಂದ ಕಿಳಿಂಗಾರು ಮಜಿರ್ಪಳ್ಳಕಟ್ಟೆ ಅಯ್ಯಪ್ಪ ಭಜನಾ ಮಂದಿರದ ಪ್ರವೇಶೋತ್ಸವ


          ಬದಿಯಡ್ಕ: ಕಿಳಿಂಗಾರು ಮಜಿರ್ಪಳ್ಳಕಟ್ಟೆಯಲ್ಲಿ ಕಳೆದ 41ವರ್ಷಗಳಿಂದ ಆಸ್ತಿಕರ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದ್ದ  ಶ್ರೀಅಯ್ಯಪ್ಪ ಭಜನಾಮಂದಿರದ ನೂತನ ಕಟ್ಟಡದ ಪ್ರವೇಶೋತ್ಸವ, ಪ್ರತಿಷ್ಠಾ ಮಹೋತ್ಸವ ಹಾಗೂ 41ನೇ ವಾರ್ಷಿಕ ಭಜನಾ ಮಹೋತ್ಸವ ಡಿ.17ರಿಂದ 19ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
    ಡಿ.17ರಂದು ಶನಿವಾರ ಪೂರ್ವಾಹ್ನ 10ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಸಂಜೆ 5ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, 7ರಿಂದ ಪುಣ್ಯಾಹ ವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹಾಂತ ಜರಗಲಿದೆ. 18ರಂದು ಭಾನುವಾರ ಪೂರ್ವಾಹ್ನ 6ಕ್ಕೆ ಕಿಳಿಂಗಾರು ಅಶ್ವತ್ಥ ಕಟ್ಟೆಯಿಂದ ನೂತನ ಮಂದಿರಕ್ಕೆ ಅಯ್ಯಪ್ಪ ಸ್ವಾಮಿಯ ರಜತ ಚಿತ್ರ ಫಲಕದ ಭವ್ಯ ಮೆರವಣಿಗೆ, 6.30ರಿಂದ ಗಣಪತಿ ಹೋಮ, 6.50 ಹಾಗೂ 8.45ರ ಶುಭ ಮುಹೂರ್ತದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ದಿವ್ಯ ಉಪಸ್ಥಿತಿಯಲ್ಲಿ ಮೊಳೆಯಾರು ಶ್ರೀ ನಾರಾಯಣ ಗುರುಸ್ವಾಮಿಯವರ ದಿವ್ಯ ಹಸ್ತದಲ್ಲಿ ಅಯ್ಯಪ್ಪ ಸ್ವಾಮಿಯ ರಜತ ಚಿತ್ರ ಫಲಕ ಪ್ರತಿಷ್ಠೆ, 9ಕ್ಕೆ ಭಜನೆ, 10ರಿಂದ ಕಂಬಾರು ಶ್ರೀ ದುರ್ಗಾ ಪರಮೇಶ್ವರಿ ಭಜನಾಸಂಘದವರಿಂದ ಕುಣಿತ ಭಜನೆ, 12.30ಕ್ಕೆ ಶರಣಂ ವಿಳಿ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಅನ್ನದಾನ ಜರಗಲಿದೆ. ಅಪರಾಹ್ನ 2.30ರಿಂದ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಸಂಜೆ 6ಕ್ಕೆ ದೀಪ ಪ್ರಜ್ವಲನೆ, ಶರಣಂವಿಳಿ, 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಮಹಿಳಾ ಸಮಿತಿ ಬಳಗದಿಂದ ಪ್ರಾರ್ಥನೆ, ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಸಮಿತಿಯ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರಿಂದ ಆಶೀರ್ವಚನ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರಿಂದ ದಿಕ್ಸೂಚಿ ಭಾಷಣ, ಶ್ರೀ ಅಯ್ಯಪ್ಪ ಸೇವಾ ಸಮಾಜದ ಟ್ರಸ್ಟಿ, ಧಾರ್ಮಿಕ ಮುಂದಾಳು, ವಾಗ್ಮಿ ಶ್ರೀ ಅಯ್ಯಪ್ಪ ದಾಸ್ ಅವರಿಂದ ಧಾರ್ಮಿಕ ಉಪಾನ್ಯಾಸ, ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅವರಿಂದ ಶುಭಾಸಂಸನೆ, ವೇದಮೂರ್ತಿ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಅವರು ದಿವ್ಯ ಉಪಸ್ಥಿತರಿರುವರು. ಪ್ರತಿಷ್ಠಾ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಭಟ್ ನಿಡುಗಳ, ಮೊಳೆಯಾರು ನಾರಾಯಣ ಗುರುಸ್ವಾಮಿ, ಶೇಣಿ ರವಿ ಗುರುಸ್ವಾಮಿ, ಬದಿಯಡ್ಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯಾ ಮಹೇಶ್ ನಿಡುಗಳ, ಪುತ್ತಿಗೆ ಪಂಚಾಯಿತಿ ಸದಸ್ಯ ಪಾಲಾಕ್ಷ ರೈ ಪುತ್ತಿಗೆ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮಾಸ್ತರ್ ವಿ.ಎಂ.ನಗರ, ಶ್ರೀ ನಾರಾಯಣ ಗುರುಸ್ವಾಮಿ ಪುತ್ತಿಗೆ, ಸೇವಾ ಸಮಿತಿಯ ಗೌರವಾಧ್ಯಕ್ಷ ಸುರೇಶ ನಿಡುಗಳ, ಅಧ್ಯಕ್ಷ ಗೋಪಾಲ ಮರಕ್ಕಾಡ್, ಶ್ರೀ ಅಯ್ಯಪ್ಪ  ಮಹಿಳಾ ಸಮಿತಿಯ ಅಧ್ಯಕ್ಷೆ ನಳಿನಾಕ್ಷಿ ಬಿ.,  ಶ್ರೀ ಶಾಸ್ತಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪ್ರಜಿತ್ ಎಂ., ಪ್ರಚಾರ ಸಮಿತಿಯ ಸಂಚಾಲಕ ಗಣೇಶ್ ಪಿ.ಎಂ.ಮುಂಡಾನ್‍ತ್ತಡ್ಕ, ಶಿವಾನಂದ ಕುಲಾಲ್ ಮೊದಲಾದವರು ಉಪಸ್ಥಿತರಿರುವರು. ರಾತ್ರಿ 8.30ಕ್ಕೆ ಅನ್ನಪ್ರಸಾದ ವಿತರಣೆ, ರಾತ್ರಿ 10ಕ್ಕೆ ಮಹಾಪೂಜೆ, ಸಾಂಸ್ಕೃತಿಕ ನೃತ್ಯ ವೈಭÀವ ಜರಗಲಿದೆ.
            19ರಂದು ಸೋಮವಾರ ಪೂರ್ವಾಹ್ನ 9ಕ್ಕೆ ದೀಪ ಪ್ರಜ್ವಲನೆ, ಸೇವಾಸಮಿತಿಯಿಂದ ಭಜನೆ ಆರಂಭ, ವಿವಿಧ ಭÀಜನಾ ಸಂಘಗಳಿಂದ ಭಜನಾ ಸಂಕೀರ್ತನೆ ಜರಗಲಿದೆ. ಸಂಜೆ 6ಕ್ಕೆ ಶ್ರೀ ಬಬ್ಬರ್ಯ ಕಟ್ಟೆಯಿಂದ ಆಕರ್ಷಕ ಉಲ್ಪೆ ಮೆರವಣಿಗೆ ಆರಂಭ, ಸಿಂಗಾರಿಮೇಳ, ಸ್ತಬ್ದ ಚಿತ್ರ, ಮೆರವಣಿಗೆಯ ಪ್ರಧಾನ ಆಕರ್ಷಣೆಯಾಗಲಿದೆ. ರಾತ್ರಿ 8.30ರಿಂದ ಅನ್ನಪ್ರಸಾದ ವಿತರಣೆ ಆರಂಭ, 10.30ಕ್ಕೆ ಮಹಾಪೂಜೆ, ಮಹಾಮಂಗಳಾರತಿ, 11ಕ್ಕೆ ಶ್ರೀ ಕೋದಂಡ ರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries