ಎರ್ನಾಕುಳಂ: ಅನಾರೋಗ್ಯದಿಂದ ಬಳಲುತ್ತಿರುವ ತಂದೆಗೆ ಯಕೃತ್ತು ಕಸಿ ಮಾಡಲು 17 ರ ಹರೆಯದ ಪುತ್ರಿಗೆ ಹೈಕೋರ್ಟ್ ಅನುಮತಿ ನೀಡಿದೆ. ತ್ರಿಶೂರ್ ಮೂಲದ ಪ್ರತೀಶ್ ಎಂಬವರಿಗೆ ಲಿವರ್ ದಾನ ಮಾಡಲು ಅವರ ಪುತ್ರಿ ದೇವಾನಂದೆಗೆ ಅನುಮತಿ ನೀಡಲಾಗಿದೆ.
ಪ್ರತೀಶ್ ಅವರ ಆರೋಗ್ಯ ಪರಿಸ್ಥಿತಿ ಕಳವಳಕಾರಿಯಾದ್ದರಿಂದ ಗಮನಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ, ವಯಸ್ಕರಿಗೆ ಮಾತ್ರ ಅಂಗಾಂಗಗಳನ್ನು ದಾನ ಮಾಡಲು ಅವಕಾಶವಿದೆ. ಈ ಕಾರಣದಿಂದ ಲಿವರ್ ದಾನಮಾಡಲು ಪುತ್ರಿ ದೇವಾನಂದೆಗೆ ಅಡ್ಡಿಯಾಯಿತು. ಇದರೊಂದಿಗೆ ಅನುಮತಿಗಾಗಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಅರ್ಜಿಯಲ್ಲಿ ರೋಗಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವಂತೆ ತಜ್ಞರ ಸಮಿತಿಗೆ ನ್ಯಾಯಾಲಯ ಸೂಚಿಸಿತ್ತು. ಇದಕ್ಕೆ ಸಂಬಂಧಿಸಿದ ವರದಿಯನ್ನೂ ಆಧರಿಸಿ ಆದೇಶ ಹೊರಡಿಸಲಾಗಿದೆ.
ಗಂಭೀರ ಯಕೃತ್ತಿನ ಕಾಯಿಲೆಯಿಂದ ಪ್ರತೀಶ್ ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತೀಶ್ ರ ಜೀವ ಉಳಿಸಲು ಯಕೃತ್ತಿನ ಕಸಿ ಒಂದೇ ಆಯ್ಕೆಯಾಗಿದೆ. ಇದಾದ ಬಳಿಕ ದಾನಿಗಳನ್ನು ಹುಡುಕಿದರೂ ಪತ್ತೆಯಾಗಿರಲಿಲ್ಲ. ಬಳಿಕ ಪುತ್ರಿ ಮುಂದೆಬಂದಳು. ಆದರೆ ಹರೆಯದ ಕಾನೂನು ತೊಡಕು ಎದುತರಾದ್ದರಿಂದ ನ್ಯಾಯಾಲಯ ಸಂಪರ್ಕಿಸಲಾಯಿತು.
ಅಂಗಾಂಗ ದಾನಕ್ಕೆ ಹೈಕೋರ್ಟ್ ಏಕ ಪೀಠ ಅನುಮತಿ ನೀಡಿದೆ.
ದೇವಾನಂದೆಯಂತಹ ಮಗಳನ್ನು ಪಡೆದ ಪೋಷಕÀರ ಆಶೀರ್ವಾದ ಅವಳ ಮೇಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಂದೆಗೆ ಯಕೃತ್ತು ದಾನ ನೀಡಲು 17 ರ ಹರೆಯದ ಪುತ್ರಿಗೆ ಅನುಮತಿ ನೀಡಿದ ಹೈಕೋರ್ಟ್: ತಿಂಗಳ ಕಾಲ ನಡೆದ ಕಾನೂನು ಹೋರಾಟಕ್ಕೆ ಜಯ
0
ಡಿಸೆಂಬರ್ 22, 2022
Tags