ಕಾಸರಗೋಡು: ಕೋಯಿಕ್ಕೋಡ್ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಶಹಲಾ(19)ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆ ವಶದಲ್ಲಿದ್ದ 1.884ಕಿ.ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಭಾನುವಾರ ತಡರಾತ್ರಿ ದುಬೈಯಿಂದ ಆಗಮಿಸಿದÉೀರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದಲ್ಲಿ ಬಂದಿಳಿದ ಸಹಲಾಳ ದೇಹ ತಪಾಸಣೆ ನಡೆಸುವ ಮಧ್ಯೆ ಒಳ ಉಡುಪಿನೊಳಗೆ ಬಟ್ಟೆಯಲ್ಲಿ ಸುತ್ತಿಡಲಾಗಿದ್ದ ಚಿನ್ನ ಪತ್ತೆಯಾಗಿದೆ. ಮೂರು ಪ್ಯಾಕೆಟ್‍ಗಳನ್ನಾಗಿ ಮಾಡಿ, ಇವುಗಳನ್ನು ಒಳ ಉಡುಪಿನೊಳಗೆ ಇರಿಸಲಾಗಿತ್ತು.
ವಿಪರ್ಯಾಸವೆಂದರೆ, ವಿಮಾನ ನಿಲ್ದಾಣದೊಳಗೆ ಏರ್‍ಕಸ್ಟಂಸ್ ಅಧಿಕಾರಿಗಳು ತಪಾಸಣೆ ನಡೆಸಿ, ಹೊರ ಬರುತ್ತಿದ್ದ ಸಂದರ್ಭ ಸಂಶಯಗೊಂಡ ಪೊಲೀಸರು ಯುವತಿಯನ್ನು ತಪಾಸಣೆಗೊಳಪಡಿಸಿದಾಗ ಒಳ ಉಡುಪಿನಲ್ಲಿ ಅವಿತಿರಿಸಿ ಸಾಗಿಸಲೆತ್ನಿಸಿದ ಚಿನ್ನ ಪತ್ತೆಯಾಗಿದೆ. ವಿಮಾನ ನಿಲ್ದಾಣಗಳಲ್ಲಿ ಕಸ್ಟಂಸ್ ಅಧಿಕಾರಿಗಳು ತಪಾಸಣೆ ನಡೆಸಿದ ನಂತರ ಪ್ರಯಾಣಿಕರಿಂದ ಚಿನ್ನ ವಶಪಡಿಸಿಕೊಳ್ಳುವ ಪ್ರಕರಣ ಹೆಚ್ಚಾಗುತ್ತಿದ್ದು, ಕಸ್ಟಂಸ್ ಅಧಿಕಾರಿಗಳ ನಡೆ ಸಂಶಯಕ್ಕೆ ಕಾರಣವಾಗುತ್ತಿದೆ.
ಯುವತಿಯಿಂದ ವಿರೋಧ :
ಆರಂಭದಲ್ಲಿ ಪೊಲೀಸರು ಚಿನ್ನಸಾಗಾಟದ ಬಗ್ಗೆ ಸಂಶಯ ವ್ಯಕ್ತಪಡಿಸಿದಾಗ ಯುವತಿ ನಿರಾಕರಿಸಿದ್ದು ಏರುದನಿಯಲ್ಲಿ ಮಾತನಾಡಲಾರಂಭಿಸಿದ್ದಳು. ಈಕೆಯ ಬ್ಯಾಗ್ ತಪಾಸಣೆ ನಡೆಸಿದರೂ ಚಿನ್ನ ಪತ್ತೆಯಾಗಿರಲಿಲ್ಲ. ನಂತರ ಮಹಿಳಾ ಪೊಲೀಸರ ಸಹಾಯದಿಂದ ಈಕೆಯ ದೇಹ ತಪಾಸಣೆ ನಡೆಸಿದಾಗ ಬಟ್ಟೆಯೊಳಗೆ ಚಿನ್ನ ಇರಿಸಿ ಹೊಲಿಗೆಹಾಕಿ ಇವುಗಳನ್ನು ಒಳ ಉಡುಪಿನೊಳಗೆ ತುರುಕಿಟ್ಟಿರುವುದು ಪತ್ತೆಯಾಗಿತ್ತು. ಈಕೆ ಈ ಹಿಂದೆ ಚಿನ್ನ ಸಾಗಾಟ ನಡೆಸಿರುವ ಬಗ್ಗೆ ಹಾಗೂ ಚಿನ್ನ ಸಾಗಾಟದ ಹಿಂದಿನ ರೂವಾರಿಗಳ ಪತ್ತೆಗೆ ಪೊಲೀಸರು ಕ್ರಮ ಆರಂಭಿಸಿದ್ದಾರೆ. ಕೋಯಿಕ್ಕೋಡ್ ವಿಮಾನ ನಿಲ್ದಾಣದಿಂದ ಹೊರಕ್ಕೆ ಚಿನ್ನ ವಶಪಡಿಸಿಕೊಳ್ಳುವ 87ನೇ ಪ್ರಕರಣ ಇದಾಗಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಚಿನ್ನಸಾಗಾಟ ಪ್ರಕರಣದಲ್ಲಿ ಶಾಮೀಲಾಗುತ್ತಿರುವುದನ್ನು ಈ ಹಿಂದೆಯೇ ಪತ್ತೆಹಚ್ಚಲಾಗಿತ್ತು. ಬಹುತೇಕ ಪ್ರಕರಣಗಳಲ್ಲಿ ಚಿನ್ನಸಾಗಾಟದಾರರು ತಾವು ಕೇವಲ ಕ್ಯಾರಿಯರ್‍ಗಳೆಂದು ನುಣುಚಿಕೊಳ್ಳುತ್ತಿದ್ದು, ಇವರ ವಿರುದ್ಧ ಕಠಿಣ ಕ್ರಮ ನಡೆಯದಿರುವುದರಿಂದ ಚಿನ್ನಸಾಗಾಟ ಪ್ರಕರಣವೂ ಹೆಚ್ಚಾಗುತ್ತಿದೆ. ಕೇರಳದ ನಾಲ್ಕು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಗಳಲ್ಲಿ ಕಣ್ಣೂರು ಮತ್ತು ಕೋಯಿಕ್ಕೋಡು ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಮಾಣದ ಚಿನ್ನಕಳ್ಳಸಾಗಾಟ ನಡೆಯುತ್ತಿದೆ.
ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಒಂದು ಕೋಟಿ ರೂ. ಮೌಲ್ಯದ ಚಿನ್ನ ವಶ-ಕಾಸರಗೋಡಿನ ಯುವತಿ ಬಂಧನ: ಒಳ ಉಡುಪಿನಲ್ಲಿರಿಸಿ 1.844ಕಿ.ಗ್ರಾಂ ಚಿನ್ನ ಸಾಗಾಟ ಮಧ್ಯೆ ಪೊಲೀಸರಿಂದ ಕಾರ್ಯಾಚರಣೆ
0
ಡಿಸೆಂಬರ್ 27, 2022