ಮಂಜೇಶ್ವರ: ಉಪ ನೋಂದವಣಾ ಕಚೇರಿಗೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಭಾರಿ ವಂಚನೆ ಪತ್ತೆಹಚ್ಚಿದ್ದಾರೆ. ವಿಜಿಲೆನ್ಸ್ ರಾಜ್ಯವ್ಯಾಪಕವಾಗಿ ಕಾರ್ಯಾಚರಣೆ ಆಯೋಜಿಸಿದ್ದು, ಕಾಸರಗೋಡಿನಲ್ಲಿ ಡಿವೈಎಸ್‍ಪಿ ಕೆ.ವಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮಂಜೇಶ್ವರ ಕಚೇರಿಯಲ್ಲಿ ಕೆಲವೊಂದು ವಂಚನೆಗಳನ್ನು ಪತ್ತೆಹಚ್ಚಲಾಗಿದ್ದು, ದಾಸ್ತವೇಜು ಬರಹಗಾರರಿಬ್ಬರಿಂದ 18ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ನೋಂದಾವಣಾ ಕಚೇರಿ ಸಿಬ್ಬಂದಿಗೆ ನೀಡಲು ಈ ಹಣ ತರಲಾಗಿದೆ ಎಂದು ಸಂಶಯಿಸಲಾಗಿದೆ. ಜಾಗಕ್ಕೆ ಸಂಬಂಧಿಸಿ ಗುರುವಾರ 30ರಷ್ಟು ನೋಂದಾವಣೆ ನಡೆದಿದ್ದು, ಪ್ರತಿ ನೋಂದವಣೆಗೂ ಹಣ ವಸೂಲಿಮಾಡಲಾಗುತ್ತಿದೆ. ಸೊತ್ತಿನ ಬೆಲೆ ಕಡಿಮೆ ದಾಖಲಿಸಿ ನೋಂದವಣೆ ನಡೆಸಲಾಗುತ್ತಿದ್ದು, ಇದಕ್ಕೆ ಲಂಚದ ರೂಪದಲ್ಲಿ ಹಣ ಸ್ವೀಕರಿಸಲಾಗುತ್ತದೆ. ಭೂಮಿ ಸಂಬಂಧ ಕೆಲವೊಂದು ವಂಚನೆಯನ್ನೂ ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಜೇಶ್ವರ ಉಪನೋಂದವಣಾ ಕಚೇರಿಗೆ ವಿಜಿಲೆನ್ಸ್ ದಾಳಿ-18ಸಾವಿರ ನಗದು ವಶ, ನೋಂದಾವಣಾ ವಂಚನೆ ಪತ್ತೆ
0
ಡಿಸೆಂಬರ್ 16, 2022