ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೊದಲ ಎಡರಂಗ ಸರ್ಕಾರದ ಅವಧಿಯಿಂದ 19 ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ ಎಂಬ ವಿವರಗಳು ಲಭ್ಯವಾಗಿದೆ.
ಇವುಗಳಲ್ಲಿ 15 ಅಧಿಕೃತ ಪ್ರವಾಸಗಳಾಗಿವೆ. ಚಿಕಿತ್ಸೆಯ ಭಾಗವಾಗಿ 3 ವಿದೇಶ ಯಾತ್ರೆ ಮತ್ತು ಒಂದು ಖಾಸಗಿ ಪ್ರವಾಸ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ವಿಧಾನಸಭೆಯಲ್ಲಿ ಸಜೀವ್ ಜೋಸೆಫ್ ಅವರ ಪ್ರಶ್ನೆಗೆ ಉತ್ತರವಾಗಿ ನೀಡಿರುವ ದಾಖಲೆಯಲ್ಲಿ ಹೀಗೆ ಹೇಳಲಾಗಿದೆ. ಎರಡು ವೈದ್ಯಕೀಯ ಪ್ರವಾಸಗಳು ಮತ್ತು ಮೂರು ಅಧಿಕೃತ ಪ್ರವಾಸಗಳು ಸೇರಿದಂತೆ ಐದು ಪ್ರವಾಸಗಳಿಗೆ 32,58,185 ಖರ್ಚು ಮಾಡಲಾಗಿದೆ. ಆದರೆ ಉಳಿದ 14 ಟ್ರಿಪ್‍ಗಳ ವೆಚ್ಚವನ್ನು ಸರ್ಕಾರ ಬಹಿರಂಗಪಡಿಸಿಲ್ಲ.
ಜುಲೈ 9 ರಿಂದ 17, 2018 ರವರೆಗೆ ಅಮೆರಿಕಕ್ಕೆ ಖಾಸಗಿ ಭೇಟಿ. ಜುಲೈ 4ರಿಂದ 8ರವರೆಗೆ ಪೋಕನಾ ಸಮಾವೇಶಕ್ಕೆ ತೆರಳಿದ್ದ ಮುಖ್ಯಮಂತ್ರಿಗಳು ವೈಯುಕ್ತಿಕ ಉದ್ದೇಶಕ್ಕಾಗಿ ಮತ್ತೊಂದು ವಾರ ಅಲ್ಲೇ ಕಳೆದರು. ಈ ಅವಧಿಯನ್ನು ಖಾಸಗಿ ಪ್ರಯಾಣ ಎಂದು ಪರಿಗಣಿಸಲಾಗಿದೆ ಎಂದು ರಾಜ್ಯ ಸರ್ಕಾರ ನೀಡಿರುವ ದಾಖಲೆಯಲ್ಲಿ ತಿಳಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಮುಖ್ಯಮಂತ್ರಿ ಮತ್ತು ಅವರ ತಂಡ ವಿದೇಶ ಪ್ರವಾಸ ಕೈಗೊಂಡಾಗ ಹೋಟೆಲ್ ವಸತಿ ಮತ್ತು ಊಟಕ್ಕೆ ಬರೋಬ್ಬರಿ 43.14 ಲಕ್ಷ ರೂ. ವೆಚ್ಚಮಾಡಿದೆ. ಹೂಡಿಕೆ ಮತ್ತು ಅಧ್ಯಯನ ಇತ್ಯಾದಿಗಳನ್ನು ಉಲ್ಲೇಖಿಸಿ ವಿದೇಶ ಪ್ರವಾಸದಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ. ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವಾಗ ಮುಖ್ಯಮಂತ್ರಿಗಳು ವಿದೇಶಕ್ಕೆ ವಿಹಾರಕ್ಕೆ ತೆರಳಲು ಬೊಕ್ಕಸದ ಹಣವನ್ನು ಪೋಲು ಮಾಡುವುದು ಜನತೆಗೆ ಸವಾಲಾಗಿದೆ.
ಎಲ್ ಡಿಎಫ್ ಸರ್ಕಾರದಲ್ಲಿ ನಿತ್ಯದ ಖರ್ಚಿಗೂ ಹಣ ಇಲ್ಲದಿದ್ದರೂ ಮುಖ್ಯಮಂತ್ರಿಗಳ ಕುಟುಂಬ ವಿಹಾರ ಮಾಡುತ್ತಿದೆ. ಮುಖ್ಯಮಂತ್ರಿಗಳ ವಿದೇಶ ಪ್ರವಾಸದಿಂದ ರಾಜ್ಯಕ್ಕೆ ಆಗುವ ಲಾಭವನ್ನು ವಿವರಿಸುವುದು ಸರ್ಕಾರದ ಜವಾಬ್ದಾರಿ. ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ವರ್ಷಗಳಿಂದ ನಡೆಯುತ್ತಿರುವ ದುಂದುವೆಚ್ಚ ಈಗ ಮತತಷ್ಟು ಹೆಚ್ಚಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮುಖ್ಯಮಂತ್ರಿಗಳ ವಿದೇಶ ಪ್ರವಾಸಗಳು 19: ಬರೋಬ್ಬರಿ ಐದು ಪ್ರವಾಸಗಳಿಗೆ 32,58,185 ರೂ.ಖರ್ಚು: ವಿಧಾನಸಭೆಯಲ್ಲಿ ಮಾಹಿತಿ
0
ಡಿಸೆಂಬರ್ 06, 2022