ಬೆಂಗಳೂರು: ಐಟಿ ಕಂಪನಿ ಮೈಕ್ರೋಸಾಫ್ಟ್ ತನ್ನ ಪ್ಯಾನ್-ಇಂಡಿಯಾ 'ಫ್ಯೂಚರ್ ರೆಡಿ ಚಾಂಪಿಯನ್ಸ್ ಆಫ್ ಕೋಡ್' ಕಾರ್ಯಕ್ರಮದಡಿ ಒಂದು ತಿಂಗಳಲ್ಲಿ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ತರಬೇತಿ ನೀಡಿ ಪ್ರಮಾಣೀಕರಿಸಲಿದೆ.
ಕಾರ್ಯಕ್ರಮದ ಭಾಗವಾಗಿ, ಡೆವಲಪರ್‌ಗಳಿಗೆ ಕಲಿಯಲು, ಅಭ್ಯಾಸ ಮಾಡಲು, ಹೊಸದನ್ನು ತಿಳಿದುಕೊಳ್ಳಲು ಅಥವಾ ಮೈಕ್ರೋಸಾಫ್ಟ್ ಕ್ಲೌಡ್ ಸರ್ಟಿಫಿಕೇಟ್ ನವೀಕರಿಸಲು ಆನ್‌ಲೈನ್‌ನಲ್ಲಿ ಕಲಿಸಲಾಗುತ್ತದೆ.
ಭಾರತ ವೇಗವಾಗಿ ಬೆಳೆಯುತ್ತಿರುವ ಡೆವಲಪರ್ ಸಮುದಾಯಗಳನ್ನು ಹೊಂದಿದೆ. ಇದು ನಾವೀನ್ಯತೆಯ ಶಕ್ತಿ ಕೇಂದ್ರ. ರಾಷ್ಟ್ರದ ಬೆಳವಣಿಗೆಗೆ ಉತ್ತೇಜನ ನೀಡುವ ತಂತ್ರಜ್ಞಾನವನ್ನು ತಯಾರಿಸಲು ಡೆವಲಪರ್‌ಗಳ ಸೃಜನಶೀಲತೆ, ನಾವೀನ್ಯತೆ ಮತ್ತು ಉತ್ಸಾಹವನ್ನು ಮೈಕ್ರೋಸಾಫ್ಟ್ ಗುರುತಿಸುತ್ತದೆ ಎಂದು ಮೈಕ್ರೋಸಾಫ್ಟ್ ಇಂಡಿಯಾದ ಕಸ್ಟಮರ್ ಸಕ್ಸಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಅಪರ್ಣಾ ಗುಪ್ತಾ ಹೇಳಿದ್ದಾರೆ.
ಡೆವಲಪರ್ಸ್ ಮತ್ತು ಅಕಾಡೆಮಿಗಳನ್ನು ಉನ್ನತ ಕೌಶಲ್ಯದ ಮೂಲಕ ಭವಿಷ್ಯಕ್ಕೆ ತಯಾರು ಮಾಡುತ್ತಿದ್ದೇವೆ. ಭಾರತದಲ್ಲಿ ಡೆವಲಪರ್ ಸಮುದಾಯವನ್ನು ನಿರ್ಮಿಸಲು ಪ್ರಯತ್ನಪಡುತ್ತೇವೆ ಎಂದು ಅಪರ್ಣಾ ಗುಪ್ತಾ ಹೇಳಿದ್ದಾರೆ.
ಆಕ್ಸೆಂಚರ್, ಎಚ್.ಸಿ.ಎಲ್ ಟೆಕ್, ಐಸೆರ್ಟಿಸ್, ಇನ್ಫೋಸಿಸ್, ಇನ್ಮೊಬಿ, ಓಯೊ, ಪೇಯು, ಟಿಸಿಎಸ್, ಟೆಕ್ ಮಹೀಂದ್ರಾ, ಉಡಾನ್, VerSe Innovation, ವಿಂಬೋ ಮತ್ತು ವಿಪ್ರೋ ಸೇರಿದಂತೆ ಹಲವು ಪಾಲುದಾರರನ್ನು ಮೈಕ್ರೋಸಾಫ್ಟ್ ಹೊಂದಿದೆ.