ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಜನವರಿ 2 ರಿಂದ 4 ರವರೆಗೆ ಸುಧಾರಿತ ತಂತ್ರಜ್ಞಾನದ ಕ್ರಿಯಾತ್ಮಕ ವಸ್ತುಗಳ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನ ನಾಲ್ಕು ಸ್ಥಳಗಳಲ್ಲಿ ನ್ಯಾನೊತಂತ್ರಜ್ಞಾನದ ಭವಿಷ್ಯ ಕುರಿತು ಸಮ್ಮೇಳನ ನಡೆಯಲಿದೆ ಎಂದು ಪ್ರಧಾನ ಸಂಚಾಲಕಿ ಪೆÇ್ರ.ಸ್ವಪ್ನಾ ಎಸ್.ನಾಯರ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯುಳ್ಳ 24ಮಂದಿ ವಿಜ್ಞಾನಿಗಳು ಪ್ರಬಂಧ ಮಂಡಿಸಲಿದ್ದಾರೆ. ಅವರಲ್ಲಿ 14 ಮಂದಿ ಹೊರದೇಶದವರಾಗಿದ್ದಾರೆ. ರಷ್ಯಾ, ಆಸ್ಟ್ರೇಲಿಯಾ, ಸಿಂಗಾಪುರ್, ಜಪಾನ್, ಪೆÇೀರ್ಚುಗಲ್, ಜೆಕ್ ರಿಪಬ್ಲಿಕ್, ಗ್ರೇಟ್ ಬ್ರಿಟನ್, ಯುಎಇ, ಕೆನಡಾ ಮತ್ತು ಇಥಿಯೋಪಿಯಾ ದೇಶದವರು ಭಾಗವಹಿಸುತ್ತಿದ್ದಾರೆ.
ಜ. 2ರಂದು ಬೆಳಗ್ಗೆ 10ಕ್ಕೆ ಉಪಕುಲಪತಿ ಪೆÇ್ರ. ಎಚ್. ವೆಂಕಟೇಶ್ವರಲು ಸಮ್ಮೇಳನ ಉದ್ಘಾಟಿಸುವರು. ಕಾರ್ಬನ್ ನ್ಯಾನೊಟ್ಯೂಬ್‍ಗಳ ಸಂಶೋಧನೆಗಾಗಿ ಎರಡು ಗಿನ್ನೆಸ್ ವಿಶ್ವ ದಾಖಲೆ ಪಡದಿರುವ ಅಂತಾರಾಷ್ಟ್ರೀಯ ಖ್ಯಾತಿಯ ಮಲಯಾಳಿ ವಿಜ್ಞಾನಿ ಹಾಗೂ ಅಮೆರಿಕದ ರೈಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಜಯನ್ ಪುಳಿಕ್ಕಲ್ ಮಾಹಿತಿ ವಿನಿಮಯ ನಡೆಸುವರು. ನೇಚರ್ ಸೈನ್ಸ್ ಸೇರಿದಂತೆ ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ 2000 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ಇವರು ಉಪಕುಲಪತಿಗಳಿಂದ ಪ್ರಶಸ್ತಿ ಪಡೆದಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ವಿವಿಧ ಸಂಸ್ಥೆಗಳ ಇನ್ನೂರು ಮಂದಿ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪ್ರಬಂಧ ಮಂಡಿಸಲಿದ್ದಾರೆ. ಮೆಟೀರಿಯಲ್ ಸೈನ್ಸ್ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳ ಬಗ್ಗೆ ಸಮಾನಾಂತರ ಅಧಿವೇಶನವೂ ನಡೆಯಲಿದೆ. ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯವು ನ್ಯಾನೊತಂತ್ರಜ್ಞಾನದ ಕುರಿತು ಉತ್ತರ ಮಲಬಾರ್‍ನಲ್ಲಿ ಆಯೋಜಿಸುತ್ತಿರುವ ಅತಿದೊಡ್ಡ ಸಮ್ಮೇಳನ ಇದಾಗಿದೆ. ಅಂತರರಾಷ್ಟ್ರೀಯ ಮಾನದಂಡಗಳ ಸಂಶೋಧನೆ ಇದು ಯೋಜನೆಗಳನ್ನು ರೂಪಿಸಲು ಸಹ ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಪೆÇ್ರ.ರಾಜೇಂದ್ರ ಪಿಲಾಂಗಟ್ಟೆ, ಸಮಿತಿ ಸದಸ್ಯ ಪೆÇ್ರ.ಎ.ಶಕ್ತಿವೇಲ್, ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸುಜಿತ್ ಉಪಸ್ಥಿತರಿದ್ದರು.
2ರಿಂದ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ: ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ 24 ವಿಜ್ಞಾನಿಗಳಿಂದ ಪ್ರಬಂಧ ಮಂಡನೆ
0
ಡಿಸೆಂಬರ್ 30, 2022
Tags