ತಿರುವನಂತಪುರಂ: ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮಾದಕ ದ್ರವ್ಯ ಸೇವನೆ ತಡೆಗೆ ರಾಜ್ಯದಾದ್ಯಂತ ಪೋಲೀಸರಿಂದ ವಿಶೇಷ ಆಂದೋಲನ ನಡೆಯಲಿದೆ ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥ ಅನಿಲಕಾಂತ್ ಹೇಳಿದ್ದಾರೆ.
ಕೇರಳದಲ್ಲಿ ಮಾದಕ ದ್ರವ್ಯ ಸೇವನೆಯನ್ನು ಬಲವಾಗಿ ತಡೆಯುವ ಪ್ರಯತ್ನ ಪ್ರಗತಿಯಲ್ಲಿದೆ ಎಂದರು.
ಕುಡಿತದ ಪ್ರಕರಣಗಳಲ್ಲಿ ಬಂಧನ ಸೇರಿದಂತೆ ಕ್ರಮಗಳನ್ನು ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿದರು. ಕೇರಳಕ್ಕೆ ಡ್ರಗ್ಸ್ ತರುವ ವಿತರಕರನ್ನು ಪತ್ತೆ ಹಚ್ಚಿ ಬಂಧಿಸಲು ಸ್ಪೆಷಲ್ ಡ್ರೈವ್ ಆರಂಭಿಸಲಾಗಿದೆ ಎಂದರು.
2022 ರಲ್ಲಿ ವೇಳೆಗೆ ಮಾದಕವಸ್ತು ಪ್ರಕರಣಗಳಲ್ಲಿ ಶೇಕಡಾ 200 ರಿಂದ 300 ರಷ್ಟು ಹೆಚ್ಚ¼ವಾಗಿದೆÀ. ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪೆÇಲೀಸ್ ಮುಖ್ಯಸ್ಥರು ಘೋಷಿಸಿದರು. ಎಸ್‍ಪಿಸಿ ಕೆಡೆಟ್‍ಗಳು ಮತ್ತು ಜನಮೈತ್ರಿ ಪೆÇಲೀಸರ ಜಂಟಿ ಸಹಕಾರದೊಂದಿಗೆ ಶಾಲೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ.
ಹೊಸ ವರ್ಷದ ಸಂದರ್ಭದಲ್ಲಿ ನಿಯಮಿತ ಸ್ಪೆಷಲ್ ಡ್ರೈವ್ ಮತ್ತು ಗಸ್ತು ಇರುತ್ತದೆ ಎಂದು ಘೋಷಿಸಲಾಗಿದೆ. ರಹಸ್ಯ ಮಾಹಿತಿ ಬಂದರೆ ಅದರಂತೆ ಆರೋಪಿಗಳನ್ನು ಬಂಧಿಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
2022 ರಲ್ಲಿ ಮಾದಕವಸ್ತು ಪ್ರಕರಣಗಳಲ್ಲಿ ಶೇಕಡಾ 200 ರಿಂದ 300 ರಷ್ಟು ಹೆಚ್ಚಳ; ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮಾದಕ ವಸ್ತುಗಳ ಸೇವನೆಯನ್ನು ತಡೆಯಲು ಕೇರಳದಾದ್ಯಂತ ಪೋಲೀಸರಿಂದ ವಿಶೇಷ ಅಭಿಯಾನ: ಡಿಜಿಪಿ
0
ಡಿಸೆಂಬರ್ 19, 2022