ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಗಡಿನಾಡ ಕನ್ನಡ ರಾಜ್ಯೋತ್ಸವ-2022, ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಡಿ. 11ರಂದು ಬೆಳಗ್ಗೆ 9ರಿಂದ ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಜರುಗಲಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಜಸ್ಟಿಸ್ ಕೆ.ಎಲ್ ಮಂಜುನಾಥ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ(ಯಕ್ಷಗಾನ) ವಿದ್ವನ್ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್(ವೇದಾಧ್ಯಯನ) ಡಾ. ಅರತಿ ಕೃಷ್ಣ(ಸಮಾಜಸೇವೆ) ನಂದಳಿಕೆ ನಾರಾಯಣ ಶೆಟ್ಟಿ(ಸಾಹಿತ್ಯ), ಡಾ. ಜನಾರ್ದನ ನಾಯ್ಕ್(ವೈದ್ಯಕೀಯ), ವಕೀಲ ಮಹಮ್ಮದ್ ಅಸ್ಗರ್(ಕನ್ನಡ ಸೇವೆ), ಗಂಗಾಧರ ಆಳ್ವ ಪೆರಡಾಲ(ಕೃಷಿ), ವಸಂತ ಆಳ್ವ ತಲೆಕಳ(ಪರಿಸರ ಸಂರಕ್ಷಣೆ)ಅವರಿಗೆ ಹಾಗೂ ಸಂಘ-ಸಂಸ್ಥೆ ವಿಭಾಗದಲ್ಲಿ ಸೋಮೇಶ್ವರ ಕೋಟೆಕಾರಿನ ಪಶ್ಚಿಮ ಚಾರಿಟೇಬಲ್ ಟ್ರಸ್ಟ್‍ಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.