ನವದೆಹಲಿ: ಭಾರತದ ಸರ್‌ಗಂ ಕೌಶಲ್ ಅವರು 2022ನೇ ಸಾಲಿನ ಮಿಸೆಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
63 ದೇಶಗಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದು, 21 ವರ್ಷಗಳ ಬಳಿಕ ಭಾರತದ ಸ್ಪರ್ಧಿಯೊಬ್ಬರು ಈ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.
ಅಮೆರಿಕದ ವೆಸ್ಟ್‌ಗೇಟ್ ಲಾಸ್ ವೇಗಾಸ್ ರೆಸಾರ್ಟ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 2021ನೇ ಸಾಲಿನ ವಿಜೇತೆ ಶೈಲಿನ್ ಫೋರ್ಡ್ ಅವರು ಸರ್‌ಗಂ ಅವರಿಗೆ ಕಿರೀಟ ತೊಡಿಸಿದರು.
ಮಿಸೆಸ್ ಪಾಲಿನೇಷ್ಯಾ ಅವರು ಮೊದಲ ರನ್ನರ್ ಅಪ್ ಹಾಗೂ ಮಿಸೆಸ್ ಕೆನಡಾ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.
ಭಾರತದ ನಟಿ ಹಾಗೂ ರೂಪದರ್ಶಿ ಅದಿತಿ ಗೋವಿತ್ರಿಕರ್ ಅವರು 2001ರಲ್ಲಿ ಮಿಸೆಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದರು.