ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ಯುವವಿಭಾಗದ ನೇತೃತ್ವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪರಿಸರದಲ್ಲಿ ಜರಗಿದ `ಯುವ ಕ್ರೀಡಾಕೂಟ 2022' ಸಮಾರೋಪ ಸಮಾರಂಭದಲ್ಲಿ ಸ್ಪಧೆರ್Éಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಮಹಾಮಂಡಲ ಮಾತೃತ್ವಂನ ಈಶ್ವರಿ ಬೇರ್ಕಡವು, ಮಹಾಮಂಡಲ ಧರ್ಮಕರ್ಮ ಸಂಯೋಜಕ ಕೇಶವ ಪ್ರಸಾದ ಕೂಟೇಲು, ಶಿಷ್ಯಮಾಧ್ಯಮ ವಿಭಾಗದ ಗೋವಿಂದ ಬಳ್ಳಮೂಲೆ, ಮಾತೃತ್ವಂನ ಕುಸುಮ ಪೆರ್ಮುಖ, ಗೀತಾಲಕ್ಷ್ಮೀ ಮುಳ್ಳೇರಿಯ, ನೀರ್ಚಾಲು ವಲಯ ಅಧ್ಯಕ್ಷ ಜಯದೇವ ಖಂಡಿಗೆ, ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ, ವಿವಿಧ ವಲಯಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಬಡ್ಡಿ, ಬ್ಯಾಡ್ಮಿಂಟನ್, ಕ್ರಿಕೆಟ್, ಹಗ್ಗಜಗ್ಗಾಟ, ಓಟ ಸ್ಪರ್ಧೆಗಳು, ಚೆಂಡೆಸೆತ, ಚೆಸ್, ಕ್ಯಾರಂ ಮೊದಲಾದ ಸ್ಪರ್ಧೆಗಳಲ್ಲಿ ಯುವಕ ಯುವತಿಯರು ಆಸಕ್ತಿಯಿಂದ ಪಾಲ್ಗೊಂಡಿದ್ದರು. ವಿದ್ಯಾರ್ಥಿವಾಹಿನಿ ಪ್ರಮುಖ ಶ್ಯಾಮಪ್ರಸಾದ ಕುಳಮರ್ವ, ಗುರುಮೂರ್ತಿ ಮೇಣ ನಿರೂಪಿಸಿದರು. ಯವವಿಭಾಗ ಪ್ರಧಾನ ಕೇಶವ ಪ್ರಕಾಶ ಮುಣ್ಚಿಕ್ಕಾನ ನೇತೃತ್ವ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಮಹಾಮಂಡಲ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಮುಳ್ಳೇರಿಯ ಮಂಡಲದ ಯುವಕ್ರೀಡಾಕೂಟ 2022 ಸಮಾರೋಪ; ಬಹುಮಾನ ವಿತರಣೆ
0
ಡಿಸೆಂಬರ್ 19, 2022
Tags